ಬೆಂಗಳೂರು: ಸ್ಥಗಿತಗೊಂಡಿರುವ ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ಆರ್ಪಿ) ಕಾರಿಡಾರ್–2ರ ಕಾಮಗಾರಿಗಾಗಿ ಕೆ–ರೈಡ್ ಹೊಸದಾಗಿ ಟೆಂಡರ್ ಕರೆದಿದೆ. ಉಳಿದಿರುವ ಕಾಮಗಾರಿಯನ್ನು ಮೂರು ಪ್ಯಾಕೇಜ್ಗಳನ್ನಾಗಿ ವಿಂಗಡಿಸಲಾಗಿದೆ.

ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ನಡುವಿನ ಈ ಯೋಜನೆಯನ್ನು ಎಲ್ ಆ್ಯಂಡ್ ಟಿ ಗುತ್ತಿಗೆ ಪಡೆದಿತ್ತು. ಕಳೆದ ಮಾರ್ಚ್ನಲ್ಲಿ ಈ ಗುತ್ತಿಗೆ ಕಂಪನಿಯು ಕಾಮಗಾರಿ ಸ್ಥಗಿತಗೊಳಿಸಿತ್ತು. ಗುತ್ತಿಗೆ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದು ಮಾಡಿತ್ತು. ಹಾಗಾಗಿ ಕಾಮಗಾರಿ ಪೂರ್ಣಗೊಳಿಸಲು ಮರು ಟೆಂಡರ್ ಕರೆಯಲಾಗಿದೆ ಎಂದು ಕೆ–ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ಯಾಕೇಜ್–1: 7.795 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗ ವಿಭಾಗದ ವಿನ್ಯಾಸ ಮತ್ತು ನಿರ್ಮಾಣವನ್ನು ಒಳಗೊಂಡಿದೆ. ಬೆನ್ನಿಗಾನಹಳ್ಳಿ ಮತ್ತು ಶೆಟ್ಟಿಹಳ್ಳಿ ನಡುವೆ ಇರುವ ಎತ್ತರಿಸಿದ ವಯಾಡಕ್ಟ್ ಮತ್ತು ರ್ಯಾಂಪ್ಗಳನ್ನು ನಿರ್ಮಿಸಬೇಕಿದೆ. ಲೆವೆಲ್ 1ರಲ್ಲಿ ಬಿಬಿಎಂಪಿ ರಸ್ತೆ ಮೇಲ್ಸೇತುವೆ, ಲೆವೆಲ್ 2ರಲ್ಲಿ ಬಿಎಸ್ಆರ್ಪಿ ಹಳಿಗಳನ್ನು ಹೊಂದಿರುವ ಡಬಲ್ ಡೆಕರ್ ವಯಾಡಕ್ಟ್ನ ವಿನ್ಯಾಸ ಮತ್ತು ನಿರ್ಮಾಣವೂ ಒಳಗೊಂಡಿದೆ. ಲೊಟ್ಟೇಗೊಲ್ಲಹಳ್ಳಿ ಮತ್ತು ಯಶವಂತಪುರ ನಡುವಿನ 1.20 ಕಿ.ಮೀ ಇದಾಗಿದೆ. ಅಲ್ಲದೇ ಮತ್ತಿಕೆರೆ ನಿಲ್ದಾಣ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳ ನಿರ್ಮಾಣವೂ ಸೇರಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು 24 ತಿಂಗಳ ಗಡುವು ನಿಗದಿಪಡಿಸಲಾಗಿದೆ.

ಪ್ಯಾಕೇಜ್–2: ಬೆನ್ನಿಗಾನಹಳ್ಳಿ–ಬಾಣಸವಾಡಿ ಮತ್ತು ಬಾಣಸವಾಡಿ–ಹೆಬ್ಬಾಳ ನಡುವಿನ 11.569 ಕಿ.ಮೀ ಅಟ್ಗ್ರೇಡ್ ವಿಭಾಗದ ವಿನ್ಯಾಸ ಮತ್ತು ನಿರ್ಮಾಣ ಕಾಮಗಾರಿಗಳನ್ನು ಒಳಗೊಂಡಿದೆ. ನಾಗವಾರ ಮತ್ತು ಕನಕನಗರ ನಿಲ್ದಾಣಗಳ ಸ್ಟೇಷನ್ ಬಾಕ್ಸ್ಗಳ ನಿರ್ಮಾಣ ಸೇರಿದೆ. ಜೊತೆಗೆ ಕಾರಿಡಾರ್–2 ರ ಪ್ರಮುಖ ಸೇತುವೆಗಳು, ಕಿರು ಸೇತುವೆಗಳು, ಆರ್ಯುಬಿ (ರೋಡ್ ಅಂಡರ್ ಬ್ರಿಡ್ಜ್), ಇಆರ್ಎಸ್/ರಿಟೇನಿಂಗ್ ವಾಲ್ಗಳ ವಿನ್ಯಾಸ ಮತ್ತು ನಿರ್ಮಾಣವೂ ಈ ಪ್ಯಾಕೇಜ್ನಲ್ಲಿದೆ. ಪೂರ್ಣಗೊಳಿಸಲು 18 ತಿಂಗಳ ಗಡುವು ನಿಗದಿಪಡಿಸಲಾಗಿದೆ.

ಪ್ಯಾಕೇಜ್–3: ಯಶವಂತಪುರದಿಂದ ಚಿಕ್ಕಬಾಣವರವರೆಗೆ 5.80 ಕಿ.ಮೀ ಉದ್ದದ ಅಟ್ಗ್ರೇಡ್ ವಿಭಾಗದ ವಿನ್ಯಾಸ ಮತ್ತು ನಿರ್ಮಾಣ ಕಾಮಗಾರಿಗಳನ್ನು ಒಳಗೊಂಡಿದೆ. ಯಶವಂತಪುರ ಮತ್ತು ಚಿಕ್ಕಬಾಣವರ ನಡುವಿನ 185 ಮೀಟರ್ ಉದ್ದದ ಎತ್ತರಿಸಿದೆ ವಯಾಡಕ್ಟ್ ವಿಭಾಗದ ವಿನ್ಯಾಸ ಮತ್ತು ನಿರ್ಮಾಣವೂ ಸೇರಿದ್ದು, ಕಾಮಗಾರಿಗಳನ್ನು ಪೂರ್ಣಗೊಳಿಸಲು 18 ತಿಂಗಳ ಗಡುವು ನಿಗದಿಪಡಿಸಲಾಗಿದೆ.

ಕಾರಿಡಾರ್–2ರ ಮೂರು ಪ್ಯಾಕೇಜುಗಳ ಮೂಲಕ ಈ ಮಾರ್ಗದಲ್ಲಿರುವ 8 ಲೆವೆಲ್ ಕ್ರಾಸಿಂಗ್ಗಳು (ಎಲ್ಸಿ) ನಿವಾರಣೆಯಾಗಲಿವೆ ಎಂದು ಬಿಎಸ್ಆರ್ಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್ಟಿಪಿಯೇ ಬಿಎಸ್ಆರ್ಪಿ

ಬೆಂಗಳೂರು ಸಂಯೋಜಿತ ರೈಲು ಮೂಲಸೌಲಭ್ಯ ಅಭಿವೃದ್ಧಿ ಉದ್ಯಮ ನಿಯಮಿತ (ಬಿ–ರೈಡ್) ಇದು ಕೆ–ರೈಡ್ನ ವಿಶೇಷ ಉದ್ದೇಶ ಸಂಸ್ಥೆ (ಎಸ್ಪಿವಿ) ಆಗಿದೆ. ಬೆಂಗಳೂರು ಉಪನಗರ ಸಾರಿಗೆ ಯೋಜನೆಯನ್ನೇ ಬೆಂಗಳೂರು ಉಪನಗರ ರೈಲು ಯೋಜನೆ ಎಂದು ಕರೆಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.