ಶನಿವಾರ, ಮಾರ್ಚ್ 6, 2021
32 °C

ಯೋಧರ ಕುಟುಂಬಗಳಿಗೆ ಸ್ಥೈರ್ಯ ತುಂಬಿದ ‘ಮಹಿಳಾ ಬೈಕ್ ರ‍್ಯಾಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಿಳಾ ಬೈಕರ್‌ಗಳ ‘ಶಿ ಫಾರ್ ಸೊಸೈಟಿ’ ಸಂಸ್ಥೆಯು ಗಣರಾಜ್ಯೋತ್ಸವದ ಅಂಗವಾಗಿ ಗಡಿ ಕಾಯುವ ಯೋಧರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದೊಂದಿಗೆ ಬೆಂಗಳೂರಿನಿಂದ ಕೋಲಾರದವರೆಗೆ ಬೈಕ್ ರ‍್ಯಾಲಿಯನ್ನು ಮಂಗಳವಾರ ಆಯೋಜಿಸಿತ್ತು.

‘ಹೊಸಕೋಟೆ ಟೋಲ್ ಬಳಿ ಇರುವ ಎಂ.ವಿ.ಜೆ.ಕಾಲೇಜು ಆವರಣದಿಂದ ಮಹಿಳಾ ಬೈಕ್‌ ರ‍್ಯಾಲಿ ಆರಂಭವಾಯಿತು. ರ‍್ಯಾಲಿಯಲ್ಲಿ ಒಟ್ಟು 75 ಮಹಿಳೆಯರು ಬೈಕ್‌ ಚಲಾಯಿಸಿದರು. ಕೆಲವು ಪುರುಷರೂ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಬೈಕ್‌ಗಳ ಸಾಲು 1 ಕಿ.ಮೀ ಉದ್ದದವರೆಗೂ ಮುಂದುವರಿದಿತ್ತು. ಸೇನಾ ಸಮವಸ್ತ್ರವನ್ನು ಹೋಲುವ ಟಿ–ಶರ್ಟ್‌ಗಳನ್ನು ಧರಿಸಿದ್ದ ನಾರಿಯರು, 30 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶಿಸಿದರು’ ಎಂದು ಶಿ ಫಾರ್ ಸೊಸೈಟಿ ಸಂಸ್ಥಾಪಕಿ ಹರ್ಷಿಣಿ ವೆಂಕಟೇಶ್ ತಿಳಿಸಿದರು.

‘ಕೋಲಾರದಲ್ಲಿ 5 ಸಾವಿರಕ್ಕೂ ಹೆಚ್ಚು ಯೋಧರ ಕುಟುಂಬಗಳಿವೆ. ಇವರಿಗೆ ವಿದ್ಯುತ್ ಸಮಸ್ಯೆ ಇರುವುದನ್ನು ಮನಗಂಡು ಅಗತ್ಯವಿರುವ ಯೋಧರ ಕುಟುಂಬಗಳಿಗೆ ಸೋಲಾರ್ ಪ್ಯಾನೆಲ್ ಕಿಟ್ ಉಚಿತವಾಗಿ ವಿತರಿಸಿದ್ದೇವೆ’ ಎಂದರು. ಕಾರ್ಗಿಲ್ ಯುದ್ಧದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಕ್ಯಾ.ನವೀನ್ ನಾಗಪ್ಪ, ಸೇನೆಯ ಅಧಿಕಾರಿ ಸ್ವಾತಿ ಬಸೇಡಿಯಾ ಅವರೂ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು