ಭಾನುವಾರ, ಸೆಪ್ಟೆಂಬರ್ 26, 2021
23 °C

ವಾಕ್–ಶ್ರವಣ ಶಿಬಿರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಿರಿನಗರದ ಎಸ್‌.ಜಿ.ಎಸ್.ವಾಗ್ದೇವಿ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯ ದಿನದ ಅಂಗವಾಗಿ ವಾಕ್‌ ಮತ್ತು ಶ್ರವಣ ಶಿಬಿರಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ವೈದ್ಯ ಕೃಷ್ಣಮೂರ್ತಿ ಅವರು ಧ್ವಜಾರೋಹಣ ನೆರವೇರಿಸಿ, ಶಿಬಿರ ಉದ್ಘಾಟಿಸಿದರು.

ಆ. 31ರವರೆಗೆ ಹಿರಿಯ ನಾಗರಿಕರಿಗೆ ಶ್ರವಣ ಸಾಮರ್ಥ್ಯ ತಪಾಸಣೆ ಹಾಗೂ ಶ್ರವಣೋಪಕರಣಗಳಿಂದ ಪರೀಕ್ಷೆಗಳು ಉಚಿತವಾಗಿ ನಡೆಯಲಿವೆ. ಭಾನುವಾರ 32 ಮಂದಿಗೆ ತಪಾಸಣೆ ನಡೆಸಲಾಯಿತು. 

ಕೋವಿಡ್ ಮೊದಲ ಲಸಿಕೆ ಪಡೆದವರಿಗೆ ಶೇ 5ರಷ್ಟು ಹಾಗೂ ಎರಡನೇ ಲಸಿಕೆ ಪಡೆದವರಿಗೆ ಶೇ 10ರಷ್ಟು ರಿಯಾಯಿತಿ ಇರಲಿದೆ. ಸಂಸ್ಥೆಯಿಂದಲೇ ಶ್ರವಣೋಪಕರಣ ಖರೀದಿಸಿದರೆ, ಉಚಿತ ತಪಾಸಣೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.