ಬೆಂಗಳೂರು: ವೈದ್ಯರಿಗೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿದ ಆರೋಪದಡಿ ಬಂಧಿತನಾಗಿರುವ ಪತ್ರಕರ್ತ ಹೇಮಂತ್ ಕಶ್ಯಪ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 7ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶಿಸಿತು.

‘ನಿಮಗೆ ಸಂಬಂಧಿಸಿದ ಅಶ್ಲೀಲ ವಿಡಿಯೊ ನನ್ನ ಬಳಿ ಇದೆ. ₹ 50 ಲಕ್ಷ ಕೊಡದಿದ್ದರೆ ಅದನ್ನು ವಾಹಿನಿಯಲ್ಲಿ ಪ್ರಸಾರ ಮಾಡುತ್ತೇನೆ’ ಎಂದು ಹೇಮಂತ್ ಬೆದರಿಸಿದ್ದಾಗಿ ವೈದ್ಯ ರಮಣ್ ರಾವ್ ಸದಾಶಿವನಗರ ಠಾಣೆಗೆ ದೂರು ಕೊಟ್ಟಿದ್ದರು. ಅದರನ್ವಯ ಆತನನ್ನು ಬಂಧಿಸಿದ್ದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು.

ಇದನ್ನೂ ಓದಿ...ಬ್ಲ್ಯಾಕ್ಮೇಲ್ ಆರೋಪ: ‘ಪಬ್ಲಿಕ್ ಟೀವಿ’ ಇನ್ಪುಟ್ ಮುಖ್ಯಸ್ಥ ಹೇಮಂತ್ ಸೆರೆ

‘ನಾನು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ನಿಜ. ಆದರೆ, ಅವರು ಯಾವುದೇ ಹಣ ಕೊಟ್ಟಿರಲಿಲ್ಲ’ ಎಂದು ಹೇಮಂತ್ ಹೇಳಿಕೆ ಕೊಟ್ಟಿದ್ದಾನೆ. ಸಮಯ ವಾಹಿನಿಯ ವರದಿಗಾರ ಮಂಜುನಾಥ್, ಕ್ಯಾಮೆರಾ ಮನ್ ಮುರಳಿ ಬಂಧನಕ್ಕೆ ಶೋಧ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇವನ್ನೂ ಓದಿ...
*ಬ್ಲ್ಯಾಕ್ಮೇಲ್ ಮಾಡಿದ್ದ ಸಿಬ್ಬಂದಿ ವಜಾ: ಪಬ್ಲಿಕ್ ಟಿ.ವಿ. ರಂಗನಾಥ್ ಸ್ಪಷ್ಟನೆ

* ಮಾರ್ಫಿಂಗ್ ಭಯ ಕಾಡಿತು: ವೈದ್ಯ ರಮಣ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.