ಬೆಂಗಳೂರು: ಕನ್ನಡ ಸಿನಿಮಾವೊಂದರ ಚಿತ್ರೀಕರಣದ ವೇಳೆ ಪರಿಚಯವಾದ ಯುವತಿಯೊಬ್ಬರ ಜೊತೆ ಸಲುಗೆ ಬೆಳೆಸಿ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡು ಯುವಕನೊಬ್ಬ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಆ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘25 ವರ್ಷದ ಯುವತಿ ನೀಡಿರುವ ದೂರಿನಡಿ ಆರೋಪಿ ಸೂರಜ್ ಗೌಡ ಅಲಿಯಾಸ್ ಶಿವು ಪಾಟೀಲ ಎಂಬಾತನ ವಿರುದ್ಧ ಅತ್ಯಾಚಾರ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ನಗರದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿ ತನ್ನ ಸ್ನೇಹಿತರ ಜೊತೆ 2017ರಲ್ಲಿ ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ಹೋಗಿದ್ದರು. ಖ್ಯಾತ ನಟರೊಬ್ಬನ ಜೊತೆ ಫೋಟೊ ತೆಗೆಸಿಕೊಂಡಿದ್ದರು. ಪ್ರಸಾದನ ಕಲಾವಿದ ಎಂಬುದಾಗಿ ಹೇಳಿಕೊಂಡಿದ್ದಸೂರಜ್ ಗೌಡ, ಯುವತಿಯನ್ನು ಪರಿಚಯಿಸಿಕೊಂಡು ಮೊಬೈಲ್ ನಂಬರ್ ಪಡೆದಿದ್ದ’ ಎಂದು ವಿವರಿಸಿದರು.

‘ಯುವತಿಗೆ ಕರೆ ಮಾಡಲಾರಂಭಿಸಿದ್ದ ಆರೋಪಿ ಸ್ನೇಹ ಸಂಪಾದಿಸಿದ್ದ. 2018ರ ಮಾರ್ಚ್‌ನಲ್ಲಿ ಯುವತಿಯ ಮನೆಗೂ ಹೋಗಿದ್ದ ಆತ ಸ್ನಾನದ ಕೊಠಡಿಯಲ್ಲಿ ಕ್ಯಾಮೆರಾ ಅಳವಡಿಸಿದ್ದ. ಯುವತಿಯ ಸ್ನಾನದ ವಿಡಿಯೊ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಆ ದೃಶ್ಯವನ್ನೇ ಯುವತಿಗೆ ತೋರಿಸಿ ಬೆದರಿಸಿದ್ದ ಆರೋಪಿ ಹಲವು ಬಾರಿ ಅತ್ಯಾಚಾರ ಎಸಗಿದ್ದ’ ಎಂದು ಪೊಲೀಸರು ಹೇಳಿದರು.

’ಅತ್ಯಾಚಾರದ ದೃಶ್ಯಗಳನ್ನೂ ಆರೋಪಿ ಚಿತ್ರೀಕರಿಸಿಕೊಂಡಿದ್ದ. ಕೃತ್ಯದ ದೃಶ್ಯಗಳನ್ನೂ ತೋರಿಸಿ ಪುನಃ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ. ತನ್ನ ಜೊತೆ ಸಹಕರಿಸದಿದ್ದರೆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಅದರಿಂದ ಬೇಸತ್ತ ಯುವತಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.