ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಡಿಸೆಂಬರ್‌ 1ರಿಂದ ‘ಬಿ.ಎಲ್.ಆರ್ ಹಬ್ಬ’

Published 29 ನವೆಂಬರ್ 2023, 16:08 IST
Last Updated 29 ನವೆಂಬರ್ 2023, 16:08 IST
ಅಕ್ಷರ ಗಾತ್ರ

ಬೆಂಗಳೂರು: ‘ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್’ ವತಿಯಿಂದ ಡಿಸೆಂಬರ್‌ 1ರಿಂದ 11ರವರೆಗೆ ‘ಬಿ.ಎಲ್‌.ಆರ್‌ ಹ‌ಬ್ಬ’ವನ್ನು ಆಯೋಜಿಸಲಾಗಿದೆ.

‘ಬಹು ಸಂಸ್ಕೃತಿಯ ನಗರವಾಗಿರುವ ಬೆಂಗಳೂರಿನಲ್ಲಿ ಕಲೆ, ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಈ ಬಾರಿಯ ಬೆಂಗಳೂರು ಹಬ್ಬದಲ್ಲಿ ನೃತ್ಯ, ರಂಗಭೂಮಿ, ಸಾಹಿತ್ಯ, ಪರಂಪರೆ, ವಿನ್ಯಾಸ, ಸೇರಿದಂತೆ 12 ವರ್ಗಗಳಾಗಿ ವಿಂಗಡಿಸಿ, 45 ಮಾದರಿಗಳಲ್ಲಿ 500ಕ್ಕೂ ಹೆಚ್ಚು ವೈವಿಧ್ಯಮಯ ಕಾರ್ಯಕ್ರಮಗಳು ನಗರದ ವಿವಿಧ ಉದ್ಯಾನಗಳು ಮತ್ತು ಬೀದಿಗಳು ಸೇರಿದಂತೆ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತಿದೆ’ ಎಂದು ಬೆಂಗಳೂರು ಹಬ್ಬದ ನಿರ್ದೇಶಕ ರವಿಚಂದರ್ ಹೇಳಿದ್ದಾರೆ. 

‘ಬೆಂಗಳೂರು ಲಿಟ್‌ ಫೆಸ್ಟ್‌, ಸಂಜೆ @ ಅಟ್ಟಾ ಗಲಾಟಾ, ಕಲಾ ಕೂಟ– ದೃಶ್ಯ ಕಲೆಗಳು, 25 ವರ್ಷದೊಳಗಿನವರ ಸಿಟಿ ಫಿಲ್ಮ್‌ ಫೆಸ್ಟ್‌, ಏರ್‌ಪೋರ್ಟ್‌ ಆರ್ಟ್‌ ವಾಕ್‌ ಥ್ರೂ, ತಿಂಡಿ ಪುರಂ– ಆಹಾರ ಮೇಳ, ಕರಕುಶಲ ಮೇಳ, ರಂಗ ಕಟ್ಟೆ–ಸಂಗೀತ ರಂಗಭೂಮಿ, ನೃತ್ಯ, ವಾಕ್ಸ್‌ ಪಾಪುಲಿ–ಸಿಟಿ ಟ್ರೇಲ್ಸ್‌, ಸಿಟಿ ವಾಕ್ಸ್‌, ಹೆರಿಟೇಜ್ ವಾಕ್ಸ್‌, ಚುರು ಮುರಿ–ಸಂವಾದಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

ಓಪನ್ ಸ್ಟ್ರೀಟ್ ಮೇಳ

ನಗರದಲ್ಲಿ 6 ರಸ್ತೆಗಳಲ್ಲಿ ಡಿ. 9 ಹಾಗೂ 10ರಂದು ‘ಓಪನ್ ಸ್ಟ್ರೀಟ್ ಮೇಳ’ ಆಯೋಜಿಸಲಾಗಿದೆ. ಮಳಿಗೆಗಳು, ಸ್ಟ್ರೀಟ್ ಆರ್ಟಿಸ್ಟ್ಸ್ ಅಲಂಕಾರ, ಬಂಟಿಂಗ್ ಮತ್ತು ಲೈಟಿಂಗ್ ಸೇರಿದಂತೆ ನಾಗರಿಕರನ್ನು ಸೆಳೆಯಲು ಆಕರ್ಷಕ ಚಟುವಟಿಕೆಗಳಿರುತ್ತವೆ.

ದಿ ಬಿಗ್ ಫೀಡ್ ಫೆಸ್ಟಿವಲ್

ಬೆಂಗಳೂರು ಅರಮನೆಯ ಮೈದಾನದಲ್ಲಿ ಡಿ. 9 ಹಾಗೂ 10 ರಂದು ‘ಬಿಗ್ ಫೀಡ್ ಫೆಸ್ಟಿವಲ್’ ಹಮ್ಮಿಕೊಳ್ಳಲಾಗಿದೆ. ಆಹಾರ ಮಳಿಗೆ, ಸಂಗೀತ ಕಾರ್ಯಕ್ರಮ, ವ್ಯಾಪಾರಿ ಮಳಿಗೆಗಳು ಹಾಗೂ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ರವಿಚಂದರ್‌ ಮಾಹಿತಿ ನೀಡಿದರು.

ಬೆಂಗಳೂರು ಹಬ್ಬದಲ್ಲಿ ಭಾಗವಹಿಸುವ ಆಸಕ್ತರು ಹೆಚ್ಚಿನ ವಿವರಣೆಯನ್ನು https://habba.unboxingblr.com/  ವೆಬ್‌ಸೈಟ್‌ನಲ್ಲಿ ಮೂಲಕ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT