ಸೋಮವಾರ, ಅಕ್ಟೋಬರ್ 14, 2019
28 °C

‘ನಮ್ಮ ಮೆಟ್ರೊ’ಗೆ ₹498 ಕೋಟಿ ನಷ್ಟ

Published:
Updated:

ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಸಕ್ತ ವರ್ಷ ಟಿಕೆಟ್‌ ಮಾರಾಟದಿಂದ ಹೆಚ್ಚು ವರಮಾನ ಗಳಿಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ನಷ್ಟದ ಪ್ರಮಾಣ ಶೇ 40ರಷ್ಟು ಹೆಚ್ಚಳವಾಗಿದೆ.

ನಿಗಮಕ್ಕೆ 2017–18ರಲ್ಲಿ ₹352.25 ಕೋಟಿ ನಷ್ಟವಾಗಿತ್ತು. ಈ ಸಾಲಿನಲ್ಲಿ ₹498.41 ಕೋಟಿ ನಷ್ಟವಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.  

ನಿಗಮದ ಅಧೀನದ ಆಸ್ತಿಗಳ ವಾಣಿಜ್ಯ ಬಳಕೆ ಮತ್ತು ಜಾಹೀರಾತಿನಿಂದ ಬರುತ್ತಿದ್ದ ವರಮಾನ ಈ ಬಾರಿ ಕಡಿಮೆಯಾಗಿದೆ. ಈ ಬಾರಿ ₹81.69 ಕೋಟಿ ಮಾತ್ರ ಈ ವಿಭಾಗದಿಂದ ಬಂದಿದ್ದು, ಕಳೆದ ವರ್ಷ ₹131.64 ಕೋಟಿ ವರಮಾನ ಬಂದಿತ್ತು. ಕಾರ್ಯಾಚರಣೆ ವಿಭಾಗದಲ್ಲಿ ನಿಗಮದ ವರಮಾನ ಶೇ 25ರಷ್ಟು ಹೆಚ್ಚಾಗಿದೆ.

ಟಿಕೆಟ್‌ ಮಾರಾಟದಿಂದ ಕಳೆದ ವರ್ಷ ₹324.99 ಕೋಟಿ ವರಮಾನ ಬಂದಿತ್ತು. 2019ರ ಮಾರ್ಚ್‌ ಅಂತ್ಯಕ್ಕೆ ₹402.23 ಕೋಟಿ ವರಮಾನ ಬಂದಿದೆ. 

ಈ ಕುರಿತು ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌, ‘ನಿಗಮದ ವರಮಾನ ಮತ್ತಿತರ ಅಂಶಗಳ ಕುರಿತು ಶೀಘ್ರವೇ ಪ್ರಕಟಣೆ ಹೊರಡಿಸಲಾಗುವುದು’ ಎಂದರು.

Post Comments (+)