ಗುರುವಾರ , ಮೇ 6, 2021
22 °C

ಬಿಎಂಟಿಸಿ ಬ್ರೇಕ್ ಫೇಲ್‌: ಜಯನಗರದಲ್ಲಿ ಸರಣಿ ಅಪಘಾತ, ಇಬ್ಬರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಯನಗರದ ಈಸ್ಟ್ ಎಂಡ್ ವೃತ್ತದ ಸಮೀಪದಲ್ಲೇ ಶುಕ್ರವಾರ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಇತ್ತೀಚೆಗೆ ಸುಮ್ಮನಹಳ್ಳಿ ಬಳಿಯೂ ಸರಣಿ ಅಪಘಾತ ಸಂಭವಿಸಿತ್ತು. ಅದರ ನೆನಪು ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದೆ.

‘ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಿಎಂಟಿಸಿ ಬಸ್‌ನ ಬ್ರೇಕ್ ಫೇಲ್‌ ಆಗಿತ್ತು. ಬಸ್‌ನ ನಿಯಂತ್ರಣ ಕಳೆದುಕೊಂಡಿದ್ದ ಚಾಲಕ, ಎದುರಿಗಿದ್ದ ಕಾರಿಗೆ ಗುದ್ದಿಸಿದ್ದ. ಸರಣಿಯಾಗಿ ಬಸ್ ಹಾಗೂ ಐದು ಕಾರುಗಳು ಒಂದಕ್ಕೊಂಡು ಡಿಕ್ಕಿ ಹೊಡೆದವು. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಗಾಯವಾಯಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. 


ಸರಣಿ ಅಪಘಾತದಲ್ಲಿ ಜಖಂಗೊಂಡ ವಾಹನಗಳು

‘ಅಪಘಾತದಿಂದಾಗಿ ಸ್ಥಳದಲ್ಲಿ ವಾಹನಗಳ ಸಂಚಾರ ಬಂದ್ ಆಗಿತ್ತು. ವಿಪರೀತ ದಟ್ಟಣೆಯೂ ಉಂಟಾಯಿತು. ಜಯನಗರ ಪೊಲೀಸರು ಸ್ಥಳಕ್ಕೆ ಬಂದು ಜಖಂಗೊಂಡಿದ್ದ ಬಸ್ ಹಾಗೂ ಕಾರುಗಳನ್ನು ಸ್ಥಳಾಂತರಿಸಿದರು’ ಎಂದರು.

ಇದನ್ನೂ ಓದಿ... ಸರಣಿ ಅಪಘಾತ: ಬೈಕ್‌ ಸವಾರರಿಬ್ಬರ ದುರ್ಮರಣ


ಸರಣಿ ಅಪಘಾತದಲ್ಲಿ ಜಖಂಗೊಂಡ ವಾಹನಗಳು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು