ಭಾನುವಾರ, ಜನವರಿ 19, 2020
21 °C

ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ನೊಂದಾಯಿತಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್ ಪಾಸ್‌ ವಿತರಣೆಯನ್ನು ಬಿಎಂಟಿಸಿ ಆರಂಭಿಸಿದೆ.

‘ಸಹಾಯ ಹಸ್ತ’ ಹೆಸರಿನಲ್ಲಿ ಪಾಸ್ ವಿತರಿಸುತ್ತಿದೆ. ಯಲಹಂಕ ಹಳೇ ಬಸ್ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ಹೊಸಕೋಟೆ ಬಸ್ ನಿಲ್ದಾಣ, ಶಾಂತಿನಗರ, ಬನಶಂಕರಿ, ದೊಮ್ಮಲೂರು, ವೈಟ್‌ಫೀಲ್ಡ್‌, ಶಿವಾಜಿನಗರ, ಕೋರಮಂಗಲ, ಯಶವಂತಪುರ, ಜಯನಗರ, ಕೆಂಗೇರಿ, ವಿಜಯನಗರ, ಯಶವಂತಪುರ ಟಿಟಿಎಂಸಿಗಳಲ್ಲಿ ಪಾಸ್ ನೀಡಲಾಗುತ್ತಿದೆ.

ಕಾರ್ಮಿಕ ಕಲ್ಯಾಣ ಮಂಡಳಿ ವಿತರಿಸಿರುವ ಗುರುತಿನ ಚೀಟಿ, ಅಲ್ಲಿನ ಕಾರ್ಮಿಕ ಅಧಿಕಾರಿ ನೀಡುವ ಮಂಜೂರಾತಿ ಪತ್ರ, ಸ್ಟಾಂಪ್ ಅಳತೆಯ ಎರಡು ಭಾವಚಿತ್ರಗಳೊಂದಿಗೆ ಹಾಜರಾಗಿ ಪಾಸ್ ಪಡೆಯಬಹುದು ಎಂದು ಬಿಎಂಟಿಸಿ ತಿಳಿಸಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು