ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು To ಚಿಕ್ಕಬಳ್ಳಾಪುರ: BMTCಯಿಂದ ‘ಈಶ ಫೌಂಡೇಶನ್‌’ ಪ್ರವಾಸಿ ಪ್ಯಾಕೇಜ್‌

Published 6 ಮಾರ್ಚ್ 2024, 15:01 IST
Last Updated 6 ಮಾರ್ಚ್ 2024, 15:01 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಬಿಎಂಟಿಸಿ ‘ಈಶ ಫೌಂಡೇಷನ್‌’ ಹೆಸರಿನಡಿ ಪ್ರವಾಸಿ ಪ್ಯಾಕೇಜ್‌ ಅನ್ನು ಮಾರ್ಚ್‌ 8ರಂದು ಆರಂಭಿಸುತ್ತಿದೆ.

ರಜಾದಿನಗಳು ಮತ್ತು ವಾರಾಂತ್ಯ ದಿನಗಳಲ್ಲಿ ಈ ಪ್ರವಾಸಕ್ಕೆ ಹವಾನಿಯಂತ್ರಿತ ಬಸ್‌ಗಳನ್ನು ನಿಯೋಜಿಸುತ್ತಿದೆ. 

ಮಧ್ಯಾಹ್ನ 12ಕ್ಕೆ ಮೆಜೆಸ್ಟಿಕ್‌ ನಾಡಪ್ರಭು ಕೆಂಪೇಗೌಡ ಬಸ್‌ನಿಲ್ದಾಣದಿಂದ ಬಸ್‌ ಹೊರಡಲಿದೆ. ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ದೇವಸ್ಥಾನ, ಸರ್‌.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ, ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ ಮತ್ತು ಈಶ ಫೌಂಡೇಷನ್‌ಗೆ ಭೇಟಿ ರಾತ್ರಿ 9.30ಕ್ಕೆ ಮತ್ತೆ ಮೆಜೆಸ್ಟಿಕ್‌ ನಾಡಪ್ರಭು ಕೆಂಪೇಗೌಡ ಬಸ್‌ನಿಲ್ದಾಣಕ್ಕೆ ತಲುಪಲಿದೆ. ಪ್ರಯಾಣ ದರ ಒಬ್ಬರಿಗೆ ₹ 500 ನಿಗದಿ ಮಾಡಲಾಗಿದೆ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT