ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೆ: ಬಿಎಂಟಿಸಿಯಿಂದ ₹33 ಲಕ್ಷ ದಂಡ ಪಾವತಿ

Last Updated 7 ಮಾರ್ಚ್ 2023, 20:06 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ನೀಡಿದ್ದ ಶೇ 50ರಷ್ಟು ರಿಯಾಯಿತಿ ಸೌಲಭ್ಯವನ್ನು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪಡೆದುಕೊಂಡಿವೆ.

ಬಿಎಂಟಿಸಿ ₹33.50 ಲಕ್ಷ ದಂಡ ಪಾವತಿಸಿದ್ದರೆ, ಕೆಎಸ್‌ಆರ್‌ಟಿಸಿ ₹5.07 ಲಕ್ಷ ದಂಡ ಪಾವತಿಸಿದೆ. ಬಿಎಂಟಿಸಿ ₹1.20 ಕೋಟಿ ದಂಡ ಪಾವತಿಸಬೇಕಿತ್ತು. ಈ ಪೈಕಿ ಹಲವು ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ ಆಗಿಲ್ಲ ಎಂಬ ತಕರಾರು ಎತ್ತಿರುವ ಬಿಎಂಟಿಸಿ, ಉಲ್ಲಂಘನೆಯಾಗಿದೆ ಎಂದು ಒಪ್ಪಿಕೊಂಡ ಪ್ರಕರಣಗಳಿಗೆ ದಂಡ ಪಾವತಿಸಿದೆ.

‘ಪರಿಶೀಲನೆ ಇನ್ನೂ ಪ್ರಗತಿಯಲ್ಲಿದ್ದು, ಪರಿಶೀಲನೆ ಪೂರ್ಣಗೊಂಡಿರುವ ಪೈಕಿ ₹67 ಲಕ್ಷ ದಂಡ ಪಾವತಿಬೇಕಾಗಿತ್ತು. ಅದರಲ್ಲಿ ಶೇ 50ರಷ್ಟು ರಿಯಾಯಿತಿ ಸೌಲಭ್ಯ ಪಡೆದು ₹33.50 ಲಕ್ಷ ಪಾವತಿ ಮಾಡಲಾಗಿದೆ’ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ.

ಬಿಎಂಟಿಸಿಗೆ ಹೋಲಿಸಿದರೆ ಕೆಎಸ್‌ಆರ್‌ಟಿಸಿ ಕಡಿಮೆ ಪ್ರಮಾಣದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದೆ. ಶೇ 50ರ ರಿಯಾಯಿತಿ ಪಡೆದು ₹5.07 ಲಕ್ಷ ದಂಡ ಪಾವತಿಸಿದೆ.

ದಂಡದ ಮೊತ್ತವನ್ನು ಚಾಲಕರ ಸಂಬಳದಿಂದಲೇ ಕಡಿತ ಮಾಡಿಕೊಂಡು ಪೊಲೀಸ್ ಇಲಾಖೆಗೆ ಪಾವತಿಸಲಾಗುತ್ತಿದೆ. ವೇತನ ಕಡಿತವಾಗುತ್ತಿದ್ದರೂ ಬಿಎಂಟಿಸಿ ಬಸ್ ಚಾಲಕರು ಸಂಚಾರ ನಿಯಮ ಉಲ್ಲಂಘನೆ ಕಡಿಮೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT