ಬೆಂಗಳೂರು: ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೊ ಬಸ್ ಕಾರ್ಯಾಚರಣೆ ಆರಂಭಿಸಿದೆ.
ಮಂಗಳವಾರದಿಂದ ವೋಲ್ವೊ ಹವಾನಿಯಂತ್ರಿತ ಬಸ್ ಸಂಚಾರ ಪ್ರಾಯೋಗಿಕವಾಗಿ ಆರಂಭವಾಗಲಿದ್ದು, ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಬ್ಬಾಳ, ಯಲಹಂಕ, ರಾಣಿಕ್ರಾಸ್/ದೇವನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಆರು ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.
ಬೆಳಿಗ್ಗೆ 8.10, 8.20, ಮಧ್ಯಾಹ್ನ 12.35, 1.05, ರಾತ್ರಿ 7.15 ಮತ್ತು 7.35ಕ್ಕೆ ಕೆಂಪೇಗೌಡ ನಿಲ್ದಾಣದಿಂದ ಹೊರಡಲಿವೆ. ಚಿಕ್ಕಬಳ್ಳಾಪುರದಿಂದ ಬೆಳಿಗ್ಗೆ 10.25, 11.00, ಸಂಜೆ 17.30, 17.45, ರಾತ್ರಿ 21.15, 21.35ಕ್ಕೆ ಹೊರಡಲಿವೆ ಎಂದು ಬಿಎಂಟಿಸಿ ವಿವರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.