ಮಂಗಳವಾರ, ಜನವರಿ 28, 2020
17 °C

ವಿಧಾನಸೌಧಕ್ಕೆ ಬಾಂಬ್‌ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇನ್ನೊಂದು ವಾರದಲ್ಲಿ ವಿಧಾನಸೌಧಕ್ಕೆ ಬಾಂಬ್ ಇಡುತ್ತೇವೆ’ ಎಂದು ಅಪರಿಚಿತ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಬೆದರಿಕೆ ಸಂದೇಶ ಬರೆದ ವಿಷಯಕ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಟಕ್ಲಾಚಾಟ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಈ ಬೆದರಿಕೆ ಸಂದೇಶ ಹಾಕಲಾಗಿದೆ. ಈ ಸಂದೇಶ ವಿಠಲ್ ಕಂಬಾರ್ ಎಂಬುವವರಿಗೆ ಸಿಕ್ಕಿದ್ದು, ಅವರು ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ವಿಧಾನಸೌಧ ಭದ್ರತೆ ವಿಭಾಗದ ಇನ್‌ಸ್ಪೆಪೆಕ್ಟರ್ ರಾಜು ಎಂಬುವವರು ನೀಡಿದ ದೂರಿನ ಅನ್ವಯ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಟಕ್ಲಾಚಾಟ್ ಹೆಸರಿನ ಫೇಸ್‌ಬುಕ್ ಖಾತೆ ಹೊಂದಿದ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)