ಭಾನುವಾರ, ಏಪ್ರಿಲ್ 11, 2021
32 °C

ಬಿ.ಕೆ.ಎಸ್. ವರ್ಮಾಗೆ ‘ಬಾಂಬೆ ಆರ್ಟ್‌ ಸೊಸೈಟಿ ಪುರಸ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜೀವಮಾನ ಸಾಧನೆಗೆ ಬಾಂಬೆ ಆರ್ಟ್ ಸೊಸೈಟಿ ನೀಡುವ ‘ಸೃಜನಶೀಲ ಪುರಸ್ಕಾರ’ಕ್ಕೆ ಕಲಾವಿದ ಬಿ.ಕೆ.ಎಸ್. ವರ್ಮಾ ಆಯ್ಕೆಯಾಗಿದ್ದಾರೆ.

ವಿವಿಧ ರಾಜ್ಯಗಳಲ್ಲಿನ ಕಲಾ ಸಾಧಕರನ್ನು ಗುರುತಿಸಿ, ಸಂಸ್ಥೆಯು ಪ್ರತಿವರ್ಷ ಗೌರವಿಸುತ್ತಿದೆ. ಇದೇ ಶನಿವಾರ (ಫೆ.27) ಬೆಳಿಗ್ಗೆ 11 ಗಂಟೆಗೆ ಶಿವರಾಮ ಕಾರಂತ ನಗರದಲ್ಲಿರುವ ವರ್ಮಾ ಅವರ ಮನೆಯಲ್ಲಿಯೇ ಪ್ರಶಸ್ತಿ ಪ್ರದಾನ ನಡೆಯಲಿದೆ. ‘ಈ ಪುರಸ್ಕಾರಕ್ಕೆ ಭಾಜನವಾಗಿರುವುದು ಸಂತೋಷವನ್ನುಂಟು ಮಾಡಿದೆ. ಕಲಾ ತಪ್ಪಸಿಗೆ ಸಂದ ಅನಿರೀಕ್ಷಿತ ಪುರಸ್ಕಾರ ಇದಾಗಿದೆ. ಕೋವಿಡ್ ಕಾರಣ ಸಂಸ್ಥೆಯವರು ಮನೆಗೆ ಬಂದು ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ’ ಎಂದು ಬಿ.ಕೆ.ಎಸ್. ವರ್ಮಾ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.