‘ಕಾರ್ಮಿಕರ ಹಕ್ಕುಗಳ ದಮನ’

ಭಾನುವಾರ, ಜೂಲೈ 21, 2019
27 °C

‘ಕಾರ್ಮಿಕರ ಹಕ್ಕುಗಳ ದಮನ’

Published:
Updated:
Prajavani

ಬೆಂಗಳೂರು: ‘ನರೇಂದ್ರ ಮೋದಿ ಸರ್ಕಾರವು ಕಾರ್ಮಿಕ ಕಾನೂನುಗಳ ಸುಧಾರಣೆ ಹೆಸರಲ್ಲಿ ಕಾರ್ಮಿಕರ ಹಕ್ಕುಗಳನ್ನು ದಮನ ಮಾಡಲು ಮುಂದಾಗಿದ್ದು, ಕಾರ್ಪೊರೇಟ್ ಬಂಡವಾಳದಾರರಿಗೆ ಸುಲಿಗೆ ಮಾಡಲು ರಹದಾರಿ ಒದಗಿಸಿಕೊಟ್ಟಿದೆ’ ಎಂದು ಸಿಐಟಿಯು ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪ್ರಕಾಶ್ ಆರೋಪಿಸಿದರು.

ಹೊಸೂರು ರಸ್ತೆ ಕೂಡ್ಲುಗೇಟ್ ಬಳಿ ಭಾನುವಾರ ನಡೆದ ಸಿಐಟಿಯು ಬೊಮ್ಮನಹಳ್ಳಿ ವಲಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಕಾರ್ಮಿಕರಿಗಾಗಿ ಇರುವ 44 ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ಬದಲಾಯಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದು ಭಾರತದ ಕಾರ್ಮಿಕ ವರ್ಗಕ್ಕೆ ಮರಣ ಶಾಸನವಾಗಲಿದೆ ಎಂದರು. ದೇಶದ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಶೇಖರಣೆ ಆಗುತ್ತಿರುವುದರಿಂದ ಆರ್ಥಿಕತೆ ನಿಂತ ನೀರಾಗಲಿದ್ದು, ಅರ್ಥವ್ಯವಸ್ಥೆಯನ್ನು ಪ್ರಪಾತಕ್ಕೆ ತಳ್ಳಲಿದೆ ಎಂದು ವಿಶ್ಲೇಷಿಸಿದರು. ಸರ್ಕಾರದ ಈ ನಡೆಯನ್ನು ವಿರೋಧಿಸಿ ಹಲವು ಜನ ಆರ್ಥಿಕ ತಜ್ಞರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸಿಐಟಿಯು ಬೊಮ್ಮನಹಳ್ಳಿ ವಲಯ ಅಧ್ಯಕ್ಷ ಸಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !