ಮಂಗಳವಾರ, ಏಪ್ರಿಲ್ 20, 2021
29 °C

ಉದ್ಯೋಗ ಮೇಳದಲ್ಲಿ ಸಾವಿರ ಮಂದಿಗೆ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ಇಲ್ಲಿನ ಆಕ್ಸ್ ಫರ್ಡ್ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ನಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಒಂದು ಸಾವಿರ ಜನ ಉದ್ಯೋಗ ಪಡೆದರು.

ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್ ಟ್ರೇಡ್ ವ್ಯಾಸಂಗ ಮಾಡಿದ ಐಟಿಐ, ಡಿಪ್ಲೊಮಾ, ಬಿ.ಟೆಕ್, ಬಿ.ಇ ಮುಗಿಸಿದ ನಾಲ್ಕು ಸಾವಿರ ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ತಮಿಳುನಾಡಿನ 60 ಖಾಸಗಿ ಕಂಪನಿಗಳು ಭಾಗವಹಿಸಿದ್ದವು. ಉದ್ಯೋಗ ನೀಡಿಕೆಯಲ್ಲಿ ಸ್ಥಳೀಯರಿಗೆ ಹಾಗು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿತ್ತು. ಮೇಳದಲ್ಲಿ ಭಾಗವಹಿಸಿದವರಲ್ಲಿ 1251 ಜನ ಯುವತಿಯರು.

‘ಕ್ಯಾಂಪಸ್ ಸಂದರ್ಶನ ಕ್ಷೀಣವಾಗುತ್ತಿರುವ ಕಾಲಘಟ್ಟದಲ್ಲಿ, ಪ್ರತಿ ಕಾಲೇಜುಗಳಲ್ಲಿಯೂ ಇಂತಹ ಉದ್ಯೋಗ ಮೇಳಗಳು ನಡೆದಲ್ಲಿ ಅನುಕೂಲವಾಗುತ್ತದೆ. ಈ ಹಿಂದೆ ನಡೆದ ಉದ್ಯೋಗ ಮೇಳದಲ್ಲಿ ಉದ್ಯೋಗ ಗಿಟ್ಟಿಸಿ, ಉತ್ತಮ ವೇತನ ಪಡೆಯುತ್ತಿದ್ದೇನೆ’ ಎನ್ನುತ್ತಾರೆ ಆಕ್ಸ್ ಫರ್ಡ್ ಕಾಲೇಜಿನ ಹಳೆಯ ವಿದ್ಯಾರ್ಥಿ ಸ್ವರೂಪ್.

ಮೇಳ ಉದ್ಘಾಟಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಬಿನೊಯ್ ಮ್ಯಾಥ್ಯೂ ‘100 ಎಂಜಿನಿಯರ್‌ ಪದವೀಧರರಲ್ಲಿ 12 ಜನರಿಗೆ ಮಾತ್ರವೇ ಉದ್ಯೋಗ ಸಿಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಕೆಯ ಜತೆಗೆ, ಸಂವಹನ ಕೌಶಲ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು