ಬೆಂಗಳೂರು: ‘ಕೋವಿಡ್ ಕಾಯಿಲೆ ಕಾಣಿಸಿಕೊಂಡ ಬಳಿಕ ಸದಾ ನಕಾರಾತ್ಮಕ ಅಂಶಗಳೇ ನಮ್ಮನ್ನು ಕಾಡಲಾರಂಭಿಸಿವೆ. ಎಲ್ಲರನ್ನೂ ಸಂಶಯದಿಂದ ನೋಡುವ ಮನೋಭಾವ ಬೆಳೆಯುತ್ತಿದೆ. ಹಾಗಾಗಿ, ಈ ಸಂದರ್ಭದಲ್ಲಿ ಸಕಾರಾತ್ಮಕ ಅಂಶಗಳನ್ನು ಬಿತ್ತುವ ಕೆಲಸಗಳು ಹೆಚ್ಚಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಸಮನ್ವಿತ ಪ್ರಕಾಶನವು ನಗರದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಎನ್. ಶಶಿಧರ್ ಅವರ ‘ಮೋದಿ ಮೋಡಿಯ ಜಾಡು’, ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರ ‘ಸ್ವರ ರಾಗ ಸುಧಾ’ ಹಾಗೂ ಕ್ಷಮಾ ವಿ. ಭಾನುಪ್ರಕಾಶ್ ಅವರ ‘ವಿಜ್ಞಾನ ಲೋಕದ ಜ್ಞಾನ ಕುಸುಮಗಳು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಕ್ಕೆ ಗುಲಾಮರಾಗಿದ್ದು, ಸತ್ಯಾಸತ್ಯತೆಯನ್ನು ಪರಿಶೀಲಿಸದೆಯೇ ಅಲ್ಲಿ ಬರುವ ಸಂದೇಶಗಳನ್ನು ಲೈಕ್ ಮತ್ತು ಶೇರ್ ಮಾಡಲು ಸೀಮಿತರಾಗುತ್ತಿದ್ದೇವೆ’ ಎಂದರು.

ರಂಗಕರ್ಮಿ ಎಸ್.ಎನ್. ಸೇತುರಾಮ್ ಮಾತನಾಡಿ, ‘ಖಾಸಗಿ ಶಿಕ್ಷಣ ಸಂಸ್ಥೆಗಳು ಟ್ರಸ್ಟ್‌ನ ಹೆಸರಿನಲ್ಲಿ ಬೇರೆಯದೇ ಲೆಕ್ಕವನ್ನು ಸೃಷ್ಟಿಸಿ, ಪ್ರತಿವರ್ಷ ನಷ್ಟ ಎಂದು ತೋರಿಸುತ್ತಿವೆ. ಅವುಗಳ ಈ ಲೆಕ್ಕವು ಜನಸಾಮಾನ್ಯರಿಗೆ ಅರ್ಥವಾಗದ ಕಾರಣ ಅವರು ಬೇರೆಯದೇ ರೀತಿಯಲ್ಲಿ ಗ್ರಹಿಸುತ್ತಿದ್ದಾರೆ. ಪ್ರಾಮಾಣಿಕತೆಗೆ ಗೌರವ ಬರುವುದು ನಿಧಾನ. ಆದರೆ, ಯಾವತ್ತಿಗೂ ಇದ್ದೇ ಇರುತ್ತದೆ‘ ಎಂದರು.

ಪುಸ್ತಕಗಳ ಪರಿಚಯ
ಪುಸ್ತಕ: ‘ಮೋದಿ ಮೋಡಿಯ ಜಾಡು’
ಲೇಖಕರು: ಎನ್. ಶಶಿಧರ್
ಪುಟಗಳು: 96
ಬೆಲೆ: ₹ 110

ಪುಸ್ತಕ: ‘ಸ್ವರ ರಾಗ ಸುಧಾ’
ಲೇಖಕರು: ಡಿ.ಎಸ್. ಶ್ರೀನಿವಾಸ ಪ್ರಸಾದ್
ಪುಟಗಳು: 102
ಬೆಲೆ: ₹ 120

ಪುಸ್ತಕ: ‘ವಿಜ್ಞಾನ ಲೋಕದ ಜ್ಞಾನ ಕುಸುಮಗಳು’
ಲೇಖಕರು: ಕ್ಷಮಾ ವಿ. ಭಾನುಪ್ರಕಾಶ್
ಪುಟಗಳು: 120
ಬೆಲೆ: ₹ 150
ಪ್ರಕಾಶನ ಸಂಸ್ಥೆ: ಸಮನ್ವಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.