ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬೋರ್‌ ಬ್ಯಾಂಕ್‌ ರಸ್ತೆ ಮೂರು ದಿನ ಬಂದ್‌

Published 10 ಮೇ 2024, 16:13 IST
Last Updated 10 ಮೇ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಗೆ ರಸ್ತೆ ಕುಸಿದ ಕಾರಣ ಮುಚ್ಚಲಾಗಿರುವ ಬೋರ್‌ ಬ್ಯಾಂಕ್‌ ರಸ್ತೆಯು ಮೂರು ದಿನಗಳಲ್ಲಿ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಾಳೇನ ಅಗ್ರಹಾರ–ನಾಗವಾರವನ್ನು ಸಂಪರ್ಕಿಸುವ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಪಾಟರಿ ಟೌನ್‌ ಮೆಟ್ರೊ ನಿಲ್ದಾಣ ಕಾಮಗಾರಿಗಾಗಿ ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆ ಬುಧವಾರ ಮಳೆಗೆ ಕುಸಿದು ಬಿದ್ದಿತ್ತು. ಜೊತೆಗೆ ಬೋರ್‌ ಬ್ಯಾಂಕ್‌ ರಸ್ತೆಯ ಮಧ್ಯದಲ್ಲಿಯೇ ಕುಸಿದು 5 ಅಡಿಗಿಂತಲೂ ಆಳವಾದ ಗುಂಡಿ ಬಿದ್ದಿತ್ತು. ಬೋರ್ ಬ್ಯಾಂಕ್ ರಸ್ತೆ ಸಂಚಾರವನ್ನು ಮುಚ್ಚಿ, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮಾಡಲಾಗಿತ್ತು. 

‘ಒಂದು ಕಡೆಯಿಂದ ಪಾಟರಿ ಟೌನ್‌ ಮೆಟ್ರೊ ನಿಲ್ದಾಣಕ್ಕಾಗಿ ಕಾಮಗಾರಿ ನಡೆಯುತ್ತಿತ್ತು. ಇನ್ನೊಂದು ಕಡೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇರಲಿಲ್ಲ. ಇದರಿಂದ ರಸ್ತೆಯಲ್ಲಿಯೇ ನೀರು ನಿಂತು ಮಣ್ಣು ಕುಸಿದಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗುಂಡಿ ತುಂಬುವ ಕೆಲಸ ಆಗಿದೆ. ಇನ್ನೆರಡು ದಿನಗಳಲ್ಲಿ ರಸ್ತೆ ಸರಿಯಾಗಲಿದೆ. ಆನಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT