ಗುರುವಾರ , ಜನವರಿ 27, 2022
21 °C

ತೊಟ್ಟಿಯಲ್ಲಿ ಮುಳುಗಿ ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೀರು ಶುದ್ಧೀಕರಣ ಘಟಕದ ಬಳಿಯ ತೊಟ್ಟಿಯಲ್ಲಿ ಈಜಲು ಗೆಳೆಯರೊಂದಿಗೆ ಹೋಗಿದ್ದ 14 ವರ್ಷದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಸಂಬಂಧ ಬಾಣಸವಾಡಿ ‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿಯ ನಾಗಯ್ಯನಪಾಳ್ಯದಲ್ಲಿ ರೈಲ್ವೆ ಇಲಾಖೆಯವರು ನೀರು ಶುದ್ಧೀಕರಣ ಘಟಕ ಸ್ಥಾಪಿಸಿದ್ದು ಅಲ್ಲಿ ತೊಟ್ಟಿಯೊಂದು ಇದೆ. ಅದರ ಸುತ್ತಲೂ ಕಾಂಪೌಂಡ್‌ ಕೂಡ ಹಾಕಲಾಗಿದೆ. ಹೀಗಿದ್ದರೂ ಮೃತ ಬಾಲಕ ಹಾಗೂ ಆತನ ಸ್ನೇಹಿತರು ಅದರಲ್ಲಿ ಈಜಾಡಿ, ಬಳಿಕ ಮೀನು ಹಿಡಿದುಕೊಂಡು ಬರಲು ಅಲ್ಲಿಗೆ ಹೋಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.