ಬೆಂಗಳೂರು: ’ಬ್ರಾಹ್ಮಣರನ್ನು ಸೇವಾ ಮನೋಭಾವದ ಕಾರಣದಿಂದ ತ್ಯಾಗಮಯಿಗಳು ಎಂದು ಗುರುತಿಸಿದರೂ, ಸಮಾಜದ ಸಂಘಟನೆ ವಿಚಾರದಲ್ಲಿ ಒಗ್ಗಟ್ಟು ಮೂಡಿಸುವ ಕೆಲಸ ಆಗಬೇಕಾಗಿದೆ’ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸಲಹೆ ನೀಡಿದರು.

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಭಾನುವಾರ ಗಾಯನ ಸಮಾಜದಲ್ಲಿ ಆಯೋಜಿಸಿದ್ದ ವಿಪ್ರೋತ್ಸವ–2026 ಹಾಗೂ ಭಾರ್ಗವ ಭೂಷಣ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಒಗ್ಗಟ್ಟಿನಿಂದ ಮಾತ್ರ ಯಾವುದೇ ಸಂಘಟನೆಯಲ್ಲಿ ಬಲ ಇರಲಿದೆ. ಇದು ಬ್ರಾಹ್ಮಣರಿಗೂ ಅನ್ವಯಿಸಲಿದೆ. ಸರ್ವಾಂ ಗೀಣ ಬೆಳವಣಿಗೆಯ ದೃಷ್ಟಿಯಿಂದ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.

‘ಎಷ್ಟೇ ಕಷ್ಟಗಳಿದ್ದರೂ ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಅನಿವಾರ್ಯ. ಜತೆಗೆ ಮುಖ್ಯವಾಗಿ ಮನೆಯಲ್ಲಿ ಸುಮ್ಮನೇ ಕೂರದಂತೆ ನೋಡಿಕೊಳ್ಳಿ. ಮಕ್ಕಳ ಕೌಶಲ ವೃದ್ದಿಸಿ ಉದ್ಯೋಗಸ್ಥರನ್ನಾಗಿ ಮಾಡಲು ಪಣತೊಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.