ಅಂಗಾಂಗ ದಾನದ ಬಗ್ಗೆ ಬೃಹತ್ ಜಾಗೃತಿ ಅಭಿಯಾನ ನಡೆದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅಂಗಾಂಗಗಳನ್ನು ದಾನ ಮಾಡಲು ಮುಂದಾಗುತ್ತಾನೆ. ಇದರಿಂದ ಅಗತ್ಯ ಇರುವವರಿಗೆ ಅಂಗಾಂಗ ಕಸಿ ನಡೆಸಬಹುದು
ಡಾ. ಮೋಹನ್ ಕೇಶವಮೂರ್ತಿ, ಫೋರ್ಟಿಸ್ ಆಸ್ಪತ್ರೆಯ ಯುರೋ-ಆಂಕೊಲಾಜಿ ವಿಭಾಗದ ನಿರ್ದೇಶಕ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನ ಹಾಗೂ ಕಸಿ ಶಸ್ತ್ರಚಿಕಿತ್ಸೆ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಜೀವ ಸಾರ್ಥಕತೆ ಹೊಂದಲು ಅಂಗಾಂಗ ದಾನಕ್ಕೆ ಮುಂದಾಗಬೇಕು
ಡಾ. ರವಿಕಿರಣ್ ಎಸ್.ಕೆ., ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ ಹೆಪಟಾಲಜಿ ವಿಭಾಗದ ಮುಖ್ಯಸ್ಥ
ತೀವ್ರ ಮತ್ತು ದೀರ್ಘ ಕಾಲದ ಅಂಗಾಂಗ ವೈಫಲ್ಯಕ್ಕೆ ಅಂಗಾಂಗ ಕಸಿ ಸಹಕಾರಿ. ಅಂಗಾಂಗ ಕಸಿಗೆ ಬೇಡಿಕೆ ಹೆಚ್ಚುತ್ತಿದ್ದು ಹೊಂದಾಣಿಕೆಯಾಗುವ ರೋಗಿಗಳಿಗೆ ಕುಟುಂಬಸ್ಥರು ದಾನ ಮಾಡುತ್ತಿದ್ದಾರೆ
ಡಾ. ಸುನಿಲ್ ಕಾರಂತ್ ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಮುಖ್ಯಸ್ಥ
ಅಂಗಾಂಗ ಕಸಿ ರೋಗಿಗಳಿಗೆ ಹೊಸ ಭರವಸೆ ನೀಡುತ್ತಿದೆ. ಅಂಗಾಂಗ ದಾನ ಹೆಚ್ಚುತ್ತಿರುವುದರಿಂದ ರೋಗಿಗಳಿಗೆ ನಾಲ್ಕೈದು ತಿಂಗಳಲ್ಲಿ ಅಂಗಾಂಗಗಳು ಲಭ್ಯವಾಗುತ್ತಿವೆ
ಡಾ.ಭಗೀರಥ್ ರಘುರಾಮನ್, ನಾರಾಯಣ ಹೆಲ್ತ್‌ನ ಹೃದಯ ಕಸಿ ವಿಭಾಗದ ನಿರ್ದೇಶಕ