ಗುರುವಾರ , ಜನವರಿ 28, 2021
18 °C
ಯಲಚೇನಹಳ್ಳಿ–ಅಂಜನಾಪುರ ವಿಸ್ತರಿತ ಮಾರ್ಗ

ನಮ್ಮ ಮೆಟ್ರೊ | ರೀಚ್‌ 4ಬಿ: ಡಿಸೆಂಬರ್‌ 3ನೇ ವಾರದಲ್ಲಿ ಸೇವೆ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನ ಯಲಚೇನಹಳ್ಳಿ–ಅಂಜನಾ ಪುರ ವಿಸ್ತರಿತ ಮಾರ್ಗದಲ್ಲಿ ಡಿಸೆಂಬರ್‌ ಮೂರನೇ ವಾರದಲ್ಲಿ ಮೆಟ್ರೊ ರೈಲು ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಮೆಟ್ರೊ ರೈಲು ಸುರಕ್ಷತಾ ಆಯುಕ್ತರ ತಂಡವು (ಸಿಎಂಆರ್‌ಎಸ್‌) ಇದೇ 18 ಮತ್ತು 19ರಂದು ಈ ಮಾರ್ಗದ ಪರಿಶೀಲನೆ ನಡೆಸಿದೆ. ಸಿಎಂಆರ್‌ಎಸ್‌ ಇದೇ ಸೋಮವಾರ (ನ.30) ವರದಿ ನೀಡಲಿದ್ದು, ವಾಣಿಜ್ಯ ಸಂಚಾರ ಸೇವೆಗೆ ಅಧಿಕೃತವಾಗಿ ಅನುಮತಿ ನೀಡಲಿದೆ. ನಂತರ ಒಂದೆರಡು ವಾರಗಳಲ್ಲಿ ಸಂಚಾರ ಆರಂಭಿಸಲಾಗುತ್ತದೆ ಎಂದು ನಿಗಮದ ಮೂಲಗಳು ತಿಳಿಸಿವೆ.

‘ಪರಿಶೀಲನೆ ನಡೆಸಿದ್ದ ಆಯುಕ್ತರ ತಂಡವು, ಕೆಲವು ತಾಂತ್ರಿಕ ದೋಷ ಗಳನ್ನು ಪತ್ತೆ ಮಾಡಿ ಸರಿಪಡಿಸಲು ಸೂಚಿಸಿದೆ. ಇದಕ್ಕಾಗಿ ಒಂದೆರಡು ವಾರ ಸಮಯ ಹಿಡಿಯುತ್ತದೆ. ಡಿಸೆಂಬರ್‌ ಎರಡು ಅಥವಾ ಮೂರನೇ ವಾರದಲ್ಲಿ ಸೇವೆ ಪ್ರಾರಂಭಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಕೆಲಸಗಳು ನಡೆದಿವೆ’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ವಾಣಿಜ್ಯ ಸಂಚಾರ ಆರಂಭವಾದರೆ, ಎರಡನೇ ಹಂತದಲ್ಲಿ ಸೇವೆ ನೀಡಲಿರುವ ಪ್ರಥಮ ಮಾರ್ಗ ಇದಾಗಲಿದೆ. 6.29 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಐದು ನಿಲ್ದಾಣಗಳು ಬರುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು