ಬೆಂಗಳೂರು: ಕಬ್ಬನ್ ಪಾರ್ಕ್ ಬಳಿ ಗುರುವಾರ ಮರದ ಕೊಂಬೆ ಮುರಿದು ಮೆಟ್ರೊ ವಾಕ್ ವೇ ಮೇಲೆ ಬಿದ್ದಿದ್ದರಿಂದ ಮೆಟ್ರೊ ನೇರಳೆ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಸುಮಾರು 15 ನಿಮಿಷ ಸ್ಥಗಿತಗೊಂಡಿತು.
ಕಬ್ಬನ್ ಪಾರ್ಕ್ ನಿಲ್ದಾಣದಿಂದ ಎಂ. ಜಿ. ರಸ್ತೆ ಕಡೆಗೆ ಇರುವ ಅಪ್ ರಾಂಪ್ ನಲ್ಲಿ ಸುರಂಗ ಮಾರ್ಗದಿಂದ ಹೊರ ಬರುವಲ್ಲಿ ಗುರುವಾರ ಸಂಜೆ 4.51ಕ್ಕೆ ಕೊಂಬೆ ಬಿದ್ದಿದ್ದರಿಂದ ಸಂಚಾರಕ್ಕೆ ಅಡ್ಡಿ ಉಂಟಾಯಿತು.. ನಮ್ಮ ಮೆಟ್ರೊ ಸಿಬ್ಬಂದಿ ಕೊಂಬೆ ತೆರವುಗೊಳಿಸಿದರು. ಸಂಜೆ 5. 05ಕ್ಕೆ ಮೆಟ್ರೊ ಸಂಚಾರ ಪುನಃ ಆರಂಭಗೊಂಡಿತು ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.