ಜಿಡಿಪಿ ಬೆಳವಣಿಗೆಗೆ ಮಹಿಳಾ ಉದ್ಯಮಿಗಳ ಪಾತ್ರ ದೊಡ್ಡದು: ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ದೇಶದ ಅಭಿವೃದ್ಧಿ ಮತ್ತು ಜಿಡಿಪಿ ಬೆಳವಣಿಗೆಯಲ್ಲಿ ಮಹಿಳಾ ಉದ್ಯಮಿಗಳ ಪಾತ್ರ ದೊಡ್ಡದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಎಫ್‌ಕೆಸಿಸಿಐ ಎಂ.ವಿ ಸಭಾಂಗಣದಲ್ಲಿ ಉಬುಂಟು, ಎಫ್‌ಕೆಸಿಸಿಸಿಐ ಮತ್ತು ಗ್ಲೋಬಲ್ ಅಲೈಯನ್ಸ್ ಫಾರ್ ಮಾಸ್ ಎಂಟರ್‌ಪ್ರಿನರ್‌ಶಿಪ್ (ಗೇಮ್) ಸಹಯೋಗದಲ್ಲಿ ಮಹಿಳಾ ಸ್ವಾಮ್ಯದ ಸೂಕ್ಷ್ಮ ವ್ಯವಹಾರಗಳನ್ನು ಬೆಂಬಲಿಸುವ 6 ತಿಂಗಳ ವೇಗವರ್ಧಕ ಕಾರ್ಯಕ್ರಮವಾದ ‘ಎಕ್ಸಲರೇಟರ್ ಬೆಂಗಳೂರು’ (ಎಕ್ಸ್‌ಬಿ) ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉಬುಂಟು ಸಂಸ್ಥಾಪಕಿ ರತ್ನಪ್ರಭಾ ಮಾತನಾಡಿ, ‘ಪ್ರತಿ ಜಿಲ್ಲೆಯಲ್ಲೂ ಮಹಿಳಾ ಉದ್ಯಮಿಗಳನ್ನು ಮುಖ್ಯ ವೇದಿಕೆಗೆ ತರುವ ಕೆಲಸವನ್ನು ಉಬುಂಟು ಮಾಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಬೇಕು. ಪ್ರತಿ ಜಿಲ್ಲೆಗೂ ₹1 ಲಕ್ಷದಂತೆ ₹30 ಲಕ್ಷಗಳನ್ನು ಉಬುಂಟು ಒಕ್ಕೂಟಕ್ಕೆ ಮೀಸಲಿಟ್ಟರೆ, ಸರ್ಕಾರ ಮಾಡಬೇಕಿರುವ ಬಹುತೇಕ ಕೆಲಸವನ್ನು ನಮ್ಮ ಒಕ್ಕೂಟ ಮಾಡುತ್ತಿದೆ’ ಎಂದರು.
ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್, ಗೇಮ್‌ನ ಸಹ-ಸಂಸ್ಥಾಪಕ ಮದನ್ ಪಡಕಿ, ಗೇಮ್‌ನ ಸಹ ಸಂಸ್ಥಾಪಕ ಮದನ್ ಪ್ರಸಾದ್, ಎಸ್‌ಐಡಿಬಿಐ ಉಪ ವ್ಯವಸ್ಥಾಪಕ ವಿ. ಸತ್ಯ ವೆಂಕಟರಾವ್ ಇದ್ದರು. ಕಾರ್ಯಕ್ರಮದ ಬಳಿಕ ಮಹಿಳಾ ಉದ್ಯಮಿಗಳಿಗಿರುವ ಅವಕಾಶಗಳ ಕುರಿತು ವಿಚಾರಗೋಷ್ಠಿ ನಡೆಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.