ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ: ನೇಮಕಾತಿ ಆದೇಶ ಪತ್ರ ವಿತರಣೆ

Published 12 ಫೆಬ್ರುವರಿ 2024, 16:27 IST
Last Updated 12 ಫೆಬ್ರುವರಿ 2024, 16:27 IST
ಅಕ್ಷರ ಗಾತ್ರ

ಯಲಹಂಕ: ಗಡಿಭದ್ರತಾ ಪಡೆಯ (ಎಸ್‌ಟಿಸಿ) ಅಧೀನ ತರಬೇತಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ರೋಜ್‌ಗಾರ್‌ ಮೇಳದಲ್ಲಿ 192 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು.

ನೇಮಕವಾದ ಅಭ್ಯರ್ಥಿಗಳು ಜಿಕೆವಿಕೆ (ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ), ಬಿ.ಎಸ್‌.ಎಫ್‌, ಬಿ.ಇ.ಎಲ್‌, ಕಂದಾಯ, ಅಂಚೆ, ರೈಲ್ವೆ, ಆರೋಗ್ಯ, ಉನ್ನತ ಶಿಕ್ಷಣ ಮತ್ತಿತರ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಿಗೆ ನಿಯೋಜನೆಗೊಳ್ಳಲಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಷಿ ಮಾತನಾಡಿ, ‘ಖಾಲಿಯಿದ್ದ ಸರ್ಕಾರಿ ಹುದ್ದೆಗಳಿಗೆ ಹಿಂದಿನ ಸರ್ಕಾರಗಳಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಧಿಯಲ್ಲಿ ಬಹಳದೊಡ್ಡ ಪ್ರಮಾಣದಲ್ಲಿ  ಅಭ್ಯರ್ಥಿಗಳನ್ನು ನಿಯುಕ್ತಿಗೊಳಿಸಲಾಗಿದೆ’ ಎಂದು ತಿಳಿಸಿದರು. 

ಬಿಎಸ್‌ಎಫ್‌(ಎಸ್‌ಟಿಸಿ) ಕೇಂದ್ರದ ಐಜಿ ಜಾರ್ಜ್‌ ಮಂಜೂರನ್‌, ಬೆಂಗಳೂರು ಬಿಎಸ್‌ಎಫ್ ಕೇಂದ್ರದ ಐಜಿ ಈಪನ್‌ ಪಿ.ವಿ. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT