ಶುಕ್ರವಾರ, ನವೆಂಬರ್ 15, 2019
22 °C

ವ್ಯಾಪಾರಿ ಅಪಹರಣ ಇಬ್ಬರ ಬಂಧನ

Published:
Updated:

ಬೆಂಗಳೂರು: ವ್ಯಾಪಾರಿ ನೂರ್‌ ಇಸ್ಲಾಂ ಸರ್ದಾರ್‌ ಎಂಬುವರನ್ನು ಅಪಹರಿಸಿ, ₹ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರನ್ನು ಬಂಧಿಸುವಲ್ಲಿ ಮಾದನಾಯಕಹಳ್ಳಿ ಪೊಲೀಸರು ಯಶಸ್ವಿ ಆಗಿದ್ದಾರೆ.

ಬಿಇಎಲ್‌ ವೃತ್ತದ ಬಳಿ ಹಣ ಪಡೆಯಲು ಬಂದ ಆರೋಪಿಗಳಾದ ಸೈಯ್ಯದ್‌ ಶಬ್ಬೀರ್‌ (23) ಮತ್ತು ಸೈಯ್ಯದ್‌ ವಾಸೀಂ (25) ಬಂಧಿತರು. ಪ್ರಕರಣದ ಸೂತ್ರಧಾರ ಸುಹೇಲ್‌ ಎಂಬಾತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಗುಜರಾತಿನ ಸೂರತ್‌ನವರಾದ ಸರ್ದಾರ್‌ ಅವರು ಆಸ್ಪತ್ರೆಗೆ ಹೋಗುತ್ತಿದ್ದ ಅವರನ್ನು ಉತ್ತರ ತಾಲ್ಲೂಕಿನ ಮಾಚೋಹಳ್ಳಿ ಗೇಟ್‌ ಬಳಿ ಅಪಹರಿಸಲಾಗಿತ್ತು. ಈ ಬಗ್ಗೆ ಅವರ ಪತ್ನಿ ನುಸ್ರತ್‌ ಬೇಗಂ ಮಾದನಾಯಕಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರತಿಕ್ರಿಯಿಸಿ (+)