ಸಂಗೀತದಂತೆ ಕಾಡಿದ ಕೃಷ್ಣ ಶಾಸ್ತ್ರಿ ನೆನಪು

7

ಸಂಗೀತದಂತೆ ಕಾಡಿದ ಕೃಷ್ಣ ಶಾಸ್ತ್ರಿ ನೆನಪು

Published:
Updated:
Deccan Herald

ಬೆಂಗಳೂರು: ‘ಬಿ.ವಿ.ಕೃಷ್ಣಶಾಸ್ತ್ರಿ ನನ್ನ ಸ್ನೇಹಿತ. ತನ್ನೊಳಗಿನ ಸೃಜನಶೀಲ ತುಡಿತಗಳಿಂದ ಉತ್ತಮ ಬರಹಗಾರರಾಗಿ, ವಿಮರ್ಶಕರಾಗಿ ರೂಪುಗೊಂಡರು. ಇಂದಿಗೂ ಅವರು ಯುವಪೀಳಿಗೆಗೆ ಮಾರ್ಗದರ್ಶಕರು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು.

‘ಕಲಾವಿಮರ್ಶಕ ಬಿ.ವಿ.ಕೆ.ಶಾಸ್ತ್ರಿ ಅವರ ಜನ್ಮ ಶತಮಾನೋತ್ಸವದ ನಿಮಿತ್ತ ಭಾರತೀಯ ವಿದ್ಯಾಭವನದಲ್ಲಿ ನೂಪುರ ಸಂಸ್ಥೆ ಆಯೋಜಿಸಿದ್ದ ‘ನಿತ್ಯ ನೃತ್ಯ-2018’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚಿತ್ರಕಲೆ, ಸಂಗೀತ, ನೃತ್ಯ, ನಾಟಕ ಸೇರಿದಂತೆ ಎಲ್ಲಾ ಕಲಾರಂಗಗಳ ಪ್ರಾಚೀನ ಹಾಗೂ ನವೀನ ಸಂಪ್ರದಾಯಗಳನ್ನು ಶಾಸ್ತ್ರಿ ಅರಗಿಸಿಕೊಂಡಿದ್ದರು’ ಎಂದು ಅವರು ಹೇಳಿದರು.

‘ಸ್ವಾತಂತ್ರ್ಯ ಕಾಲದಲ್ಲಿಯೇ ಸಾಧ್ವಿ ಎಂಬ ಪತ್ರಿಕೆಯ ಹೊಣೆ ಹೊತ್ತಿದ್ದರು. ನೃತ್ಯ, ಸಂಗೀತ, ಕಲಾವಿಮರ್ಶೆ ಬಗ್ಗೆ ‘ಡೆಕ್ಕನ್‌ ಹೆರಾಲ್ಡ್‌’ಗೆ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರು. ಮುರಳಿ ಅವರ ಕಾವ್ಯನಾಮದಲ್ಲಿ ನೀಡಿರುವ ಎಲ್ಲಾ ವಿಮರ್ಶಾ ಲೇಖನಗಳು ಪ್ರಸಿದ್ಧಿ ಪಡೆದಿವೆ’ ಎಂದು ವಿವರಿಸಿದರು.

ಸಭಾಂಗಣದಲ್ಲಿ ನೆರೆದವರನ್ನು ಶಾಸ್ತ್ರಿ ಅವರ ನೆನಪುಗಳು ಬೆಚ್ಚನೆ ಸಂಗೀತದಂತೆ ಕಾಡಿದವು.

ನೂಪುರ ಭರತನಾಟ್ಯ ಶಾಲೆಯ ಅನುರಾಧಾ ವೆಂಕಟರಮಣನ್, ರಾಧಿಕಾ ರಾಮಾನುಜನ್, ರಮಾ ವೇಣುಗೋಪಾಲ್ ಭರತನಾಟ್ಯ ಪ್ರದರ್ಶಿಸಿದರು. ಶಾಸ್ತ್ರಿ ಅವರ ಕೊಡುಗೆ ಕುರಿತು ಇನ್ನೂ ಎರಡು ದಿನ ವಿಚಾರ ಸಂಕಿರಣ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !