ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಅದಾಲತ್ ಇಂದು

Last Updated 5 ಡಿಸೆಂಬರ್ 2019, 1:29 IST
ಅಕ್ಷರ ಗಾತ್ರ

ಬೆಂಗಳೂರು: ಜಲಮಂಡಳಿಯದಕ್ಷಿಣ-1, ಪಶ್ಚಿಮ-1, ಆಗ್ನೇಯ-1, ನೈರುತ್ಯ-1, ಕೇಂದ್ರ-1, ಉತ್ತರ-1, ಪೂರ್ವ-1 ಹಾಗೂ ವಾಯವ್ಯ-1 ಉಪವಿಭಾಗಗಳ ವ್ಯಾಪ್ತಿಯ ನೀರಿನ ಅದಾಲತ್‌ ಡಿಸೆಂಬರ್ 5ರಂದು ಬೆಳಿಗ್ಗೆ 9.30ರಿಂದ 11 ಗಂಟೆಯವರೆಗೆ ಸ್ಥಳೀಯಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಗಳಲ್ಲಿ ನಡೆಯಲಿದೆ. ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗುವುದು.

ದೂರವಾಣಿ ಸಂಖ್ಯೆ:22238888 ಅಥವಾ ವಾಟ್ಸ್‌ಆ್ಯಪ್‌ ಸಂಖ್ಯೆ:8762228888

ಸುಮಾ ಸುಧೀಂದ್ರಗೆ ರಾಜಾರಾವ್ ಪ್ರಶಸ್ತಿ

ಬೆಂಗಳೂರು: ಗಾನ ಕಲಾಭೂಷಣ ವೀಣೆ ರಾಜಾರಾವ್ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಸಂಗೀತ ಕಲಾವಿ
ದರಿಗೆ ನೀಡಲಾಗುವ ಈ ಸಾಲಿನ ‘ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ’ಗೆ ವೀಣಾ ವಾದಕಿ ಸುಮಾ ಸುಧೀಂದ್ರ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ₹25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಡಿಸೆಂಬರ್ 7ರಂದು ಸಂಜೆ 5 ಗಂಟೆಗೆ ಎನ್‌.ಆರ್‌.ಕಾಲೊನಿಯ ಶ್ರೀರಾಮಮಂದಿರದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಎಬಿವಿಪಿ ರಾಷ್ಟೀಯ ಅಧ್ಯಕ್ಷರಾಗಿ ಸುಬ್ಬಯ್ಯ

ಬೆಂಗಳೂರು: ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಚೆನ್ನೈನ ಡಾ.ಸುಬ್ಬಯ್ಯ ಆಯ್ಕೆಯಾಗಿದ್ದಾರೆ ಎಂದು ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಹರ್ಷನಾರಾಯಣ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ಆಗ್ರಾದಲ್ಲಿ ಇತ್ತೀಚೆಗೆ ನಡೆದ ಎಬಿವಿಪಿ ರಾಷ್ಟ್ರೀಯ ಅಧಿವೇಶನದಲ್ಲಿ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಯಿತು’ ಎಂದರು.

‘ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಜೆಎನ್‌ಯು ವಿದ್ಯಾರ್ಥಿನಿ ನಿಧಿ ತ್ರಿಪಾಠಿ, ಸಂಘಟನಾ ಕಾರ್ಯ
ದರ್ಶಿಯಾಗಿ ಆಶಿಷ್‌ ಚೌಹಾಣ್ ಆಯ್ಕೆಯಾಗಿದ್ದಾರೆ ಎಂದರು.

ಪ್ರೊ.ಯಶವಂತರಾವ್ ಕೇಳ್ಕರ್ ಹೆಸರಿನಲ್ಲಿ ನೀಡುವ ಎಬಿವಿಪಿಯ ಯುವ ಪುರಸ್ಕಾರವನ್ನು ಮಹಾರಾಷ್ಟ್ರದ ಸಮಾಜಸೇವಕ ಸಾಗರ ರೆಡ್ಡಿ ಅವರಿಗೆ ಪ್ರದಾನ ಮಾಡಲಾಯಿತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT