ಶನಿವಾರ, ಜೂನ್ 25, 2022
26 °C

ಸಿ.ಎ ಪರೀಕ್ಷೆ ಮುಂದೂಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ನಡುವೆಯೂ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಜುಲೈ 5 ರಿಂದ ಜುಲೈ 20ರವರೆಗೆ ಸಿ.ಎ (ಲೆಕ್ಕ ಪರಿಶೋಧಕ) ಪರೀಕ್ಷೆ ನಡೆಸಲು ಮುಂದಾಗಿದ್ದು, ಈ ಪರೀಕ್ಷೆಗಳನ್ನು ಮುಂದೂಡುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

‘ಐಸಿಎಐ ಮೇ ತಿಂಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಬೇಕಿತ್ತು. ಆದರೆ, ಕೋವಿಡ್‌ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ಪರಿಷ್ಕೃತ ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಆದರೆ, ಕೋವಿಡ್‌ ಪ್ರಕರಣಗಳ ಇನ್ನೂ ಕಡಿಮೆ ಆಗಿಲ್ಲ. ಈ ನಡುವೆ ಪರೀಕ್ಷೆಯ ದಿನ ಪ್ರಕಟಿಸಲಾಗಿದೆ’ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಇಂಟರ್‌ಮಿಡಿಯೇಟ್‌ ಕೋರ್ಸ್‌ನ (ಹಳೆ ಮತ್ತು ಹೊಸ ಕ್ರಮ) ಗ್ರೂಪ್‌–1 ಪರೀಕ್ಷೆಗಳು ಜುಲೈ 6, 8, 10, 12ರಂದು, ಗ್ರೂಪ್‌–2 ಪರೀಕ್ಷೆಗಳು 14, 16, 18 ಮತ್ತು 20 ರಂದು ಹಾಗೂ ಅಂತಿಮ ಕೋರ್ಸ್‌ (ಗ್ರೂಪ್‌–1) ಪರೀಕ್ಷೆಗಳು ಜುಲೈ 5, 7, 9, 11 ರಂದು, ಗ್ರೂಪ್‌–2 ಪರೀಕ್ಷೆಗಳು 13, 15, 17, 19ರಂದು ನಿಗದಿಯಾಗಿದೆ. ಇನ್ಸೂರೆನ್ಸ್‌ ಮತ್ತು ರಿಸ್ಕ್‌ ಮ್ಯಾನೇಜ್‌ಮೆಂಟ್‌ (ಐಆರ್‌ಎಂ) ತಾಂತ್ರಿಕ ಪರೀಕ್ಷೆಗಳು 5, 7, 9 ಮತ್ತು 11ರಂದು ನಿಗದಿಯಾಗಿದೆ.

‘ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ನೂರಾರು ಅಭ್ಯರ್ಥಿಗಳು ಹಾಜರಾಗುತ್ತಾರೆ. ಆದರೆ, ಕೋವಿಡ್ ಹರಡುತ್ತಿರುವುದರಿಂದ ಪರೀಕ್ಷೆಗೆ ಹಾಜರಾಗಲು ಸಮಸ್ಯೆ ಆಗಲಿದೆ’ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು