ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್‌ ರಸ್ತೆಯಲ್ಲಿ ಅಪಘಾತ: ಕಾರಿಗೆ ಬೆಂಕಿ ಹೊತ್ತಿ ತಾಯಿ, ಮಗು ಸಜೀವ ದಹನ

Published 3 ಅಕ್ಟೋಬರ್ 2023, 9:39 IST
Last Updated 3 ಅಕ್ಟೋಬರ್ 2023, 9:39 IST
ಅಕ್ಷರ ಗಾತ್ರ

ಬೆಂಗಳೂರು: ನೈಸ್‌ ರಸ್ತೆಯ ಸೋಮಪುರ ಬಳಿ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಸುಟ್ಟಿದ್ದು, ಕಾರಿನಲ್ಲಿದ್ದ ತಾಯಿ ಹಾಗೂ ಮಗು ಸಜೀವ ದಹನವಾಗಿದೆ.

ತಲಘಟ್ಟಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಸುಕಿನಲ್ಲಿ ಈ ಅಪಘಾತ ಸಂಭವಿಸಿದೆ.

‘ಒಂದೇ ಕುಟುಂಬದ ಐವರು ಸದಸ್ಯರು, ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ಕಾರು ಹೊರಟಿದ್ದರು. ಸೋಮಪುರ ಬಳಿ ನಿಯಂತ್ರಣ ತಪ್ಪಿದ ಕಾರು, ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ನಂತರ, ಮೋರಿಯ ಗೋಡೆಗೆ ಗುದ್ದಿ ಉರುಳಿಬಿದ್ದಿತ್ತು. ಅಪಘಾತದಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು’ ಎಂದು ಪೊಲೀಸರು ಹೇಳಿದರು.

‘ಕಾರಿನಲ್ಲಿ ಸಿಲುಕಿದ್ದ ಐವರ ಪೈಕಿ ನಾಲ್ವರನ್ನು ಜನರೇ ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಮಗುವನ್ನು ಹೊರಗೆ ತೆಗೆಯಲು ಸಾಧ್ಯವಾಗಿರಲಿಲ್ಲ. ಮಗು ಕಾರಿನಲ್ಲಿ ಸಿಲುಕಿ ಬೆಂಕಿ ಹೊತ್ತಿಕೊಂಡು ಸಜೀವ ದಹನವಾಗಿದೆ. ಮಹಿಳೆ ಸಿಂಧು ಎಂಬುವವರೂ ಮೃತಪಟ್ಟಿದ್ದಾರೆ. ಉಳಿದವರ ಸ್ಥಿತಿ ಚಿಂತಾಜನಕವಾಗಿದೇ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT