ಬೆಂಗಳೂರು: ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದ ಕಾರಿಗೆ ದ್ವಿಚಕ್ರ ವಾಹನ ಗುದ್ದಿಸಿದ ಅಪರಿಚಿತರು, ಕಾರಿನೊಳಗೆ ₹ 5.70 ಲಕ್ಷ ಹಣ ಇದ್ದ ಪರ್ಸ್ ಲಪಟಾಯಿಸಿದ ಘಟನೆ ವಿಜಯನಗರದ ಪ್ರತಾಪನಗರದಲ್ಲಿ ನಡೆದಿದೆ.

ಹಣ ಕಳೆದುಕೊಂಡ ನಾಗರಬಾವಿಯ ಶೈಲಾ ಎಂಬುವರು ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಬಸವೇಶ್ವರ ನಗರದಲ್ಲಿರುವ ಆಕ್ಸಿಸ್ ಬ್ಯಾಂಕಿನಲ್ಲಿ ಅಕ್ಕನ ಮಗ ಕಾರ್ತಿಕ್‌ನ ಹೆಸರಿನ ಖಾತೆಯಲ್ಲಿದ್ದ ₹ 5.20 ಲಕ್ಷ ಡ್ರಾ ಮಾಡಿ ಪರ್ಸ್‌ನಲ್ಲಿ ಇಟ್ಟುಕೊಂಡು ಕಾರಿನಲ್ಲಿ ಹೋಗುತ್ತಿದ್ದೆ. ಈ ವೇಳೆ, ಸವಾರನೊಬ್ಬ ತನ್ನ ಬೈಕ್ ಅನ್ನು ಕಾರಿಗೆ ಗುದ್ದಿಸಿ ಗಲಾಟೆ ಮಾಡಿದ್ದ. ಅದೇ ವೇಳೆಗೆ ಇನ್ನೂ 3–4 ಮಂದಿ ಅಲ್ಲಿಗೆ ಬಂದು ಮತ್ತಷ್ಟು ಗಲಾಟೆ ಮಾಡಿದ್ದರು. ಈ ವೇಳೆ ಕಾರಿನೊಳಗಿದ್ದ ಪರ್ಸ್ ಅನ್ನು ಅಪರಿಚಿತರು ತೆಗೆದುಕೊಂಡು ಹೋಗಿದ್ದಾರೆ. ಪರ್ಸ್‌ನಲ್ಲಿ ಆ ಹಣದ ಜೊತೆಗೆ ಇನ್ನೂ ₹50 ಸಾವಿರ ನಗದು, ಚಿನ್ನದ ಓಲೆ, ಮೊಬೈಲ್, ಚೆಕ್ ಪುಸ್ತಕಇದ್ದವು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.