ಬೆಂಗಳೂರು: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು 2021ನೇ ಸಾಲಿನ ‘ಮಾಯಾ ಕಾಮತ್ ಸ್ಮಾರಕ ಪ್ರಶಸ್ತಿ’ಗಳಿಗಾಗಿ ವ್ಯಂಗ್ಯಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಿದೆ.

ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ‘ಉತ್ತಮ ರಾಜಕೀಯ ವ್ಯಂಗ್ಯಚಿತ್ರ ಪ್ರಶಸ್ತಿ’ ವಿಭಾಗದಲ್ಲಿ ₹25 ಸಾವಿರ (ಪ್ರಥಮ), ₹15 ಸಾವಿರ (ದ್ವಿತೀಯ), ₹5 ಸಾವಿರ (ತೃತೀಯ) ಹಾಗೂ ತೀರ್ಪುಗಾರರಿಂದ ಮೆಚ್ಚುಗೆ ಪಡೆಯುವ ಮೂರು ವ್ಯಂಗ್ಯಚಿತ್ರಗಳಿಗೆ ತಲಾ ₹2,500 ನಗದು ಬಹುಮಾನ ಇರಲಿದೆ.

‘ವಿದೇಶಿ ವ್ಯಂಗ್ಯಚಿತ್ರ ಪ್ರಶಸ್ತಿ’ ವಿಭಾಗದಲ್ಲಿ ಪ್ರಥಮ ₹14,853 (200 ಡಾಲರ್), ದ್ವಿತೀಯ ₹7,427.20 (100 ಡಾಲರ್) ನಗದು ಬಹುಮಾನ ಹಾಗೂ ‘ಅತ್ಯುತ್ತಮ ಉದಯೋನ್ಮುಖ ವ್ಯಂಗ್ಯಚಿತ್ರ ಪ್ರಶಸ್ತಿ’ಯಾಗಿ ₹10 ಸಾವಿರ ನಗದು ಬಹುಮಾನ ನೀಡಲಾಗುವುದು.

ಸ್ಪರ್ಧೆಗೆ ವ್ಯಂಗ್ಯಚಿತ್ರಗಳನ್ನು ತಲುಪಿಸಲು ಮಾರ್ಚ್ 31 ಕೊನೆಯ ದಿನ. ಮೇ ತಿಂಗಳಿನಲ್ಲಿ ವಿಜೇತರನ್ನು ಘೋಷಿಸಲಾಗುವುದು. ಜೂನ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ mkmawards@gmail.com ಅಥವಾ www.cartoonistsindia.com ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ:ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ಮಿಡ್‌ಫೋರ್ಡ್ ಹೌಸ್, ಎಂ.ಜಿ.ರಸ್ತೆ.

ಸಂಪರ್ಕ:9980091428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.