ಶುಕ್ರವಾರ, ನವೆಂಬರ್ 22, 2019
20 °C

ಸಿಸಿಬಿ ದಾಳಿ; 39 ಮಂದಿ ಬಂಧನ

Published:
Updated:

ಬೆಂಗಳೂರು: ನಗರದ ‘ಮಾಸ್ ರಾಯಲ್’, ‘ಸಿಂಚನ’ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‌ಗಳ ಮೇಲೆ ಸಿಸಿಬಿ ಪೊಲೀಸರು ಶುಕ್ರವಾರ ದಾಳಿ ಮಾಡಿದ್ದು, 39 ಮಂದಿಯನ್ನು ಬಂಧಿಸಿ, ₹ 1.17 ಲಕ್ಷ ಜಪ್ತಿ ಮಾಡಿದ್ದಾರೆ.

‘ಫ್ರೇಜರ್‌ಟೌನ್‌ನಲ್ಲಿರುವ ಮಾಸ್‌ ರಾಯಲ್‌ ಕ್ಲಬ್‌, ಅರಕೆರೆ ಬಳಿಯ ಸಿಂಚನ ಕ್ಲಬ್‌ನಲ್ಲಿ ಸದಸ್ಯರಲ್ಲದ ವ್ಯಕ್ತಿಗಳು, ಹಣ ಪಣಕ್ಕಿಟ್ಟು ಜೂಜು ಆಡುತ್ತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಹಲವು ಕ್ಲಬ್‌ಗಳು ಪರವಾನಗಿ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಂಥ ಕ್ಲಬ್‌ಗಳ ಮೇಲೆ ನಿಗಾ ಇಟ್ಟು ದಾಳಿ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)