ಬೆಂಗಳೂರು: ‘ಜನರಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಬೆಳೆಯದೇ ಹೋದರೆ ಕಾನೂನಿನಿಂದಲೇ ನಿರೀಕ್ಷಿತ ಬದಲಾವಣೆ ತರಲು ಸಾಧ್ಯವಿಲ್ಲ. ಈ ಕಾರಣಕ್ಕೇ ಮೌಢ್ಯ ನಿಷೇಧ ಕಾಯ್ದೆ ಪರಿಣಾಮಕಾರಿ ಆಗಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜನ ಪ್ರಕಾಶನ ಆಯೋಜಿಸಿದ್ದ ಬರಗೂರು ರಾಮಚಂದ್ರಪ್ಪ ಸಂಪಾದಕತ್ವದ ‘ಕುವೆಂಪು ವಿಚಾರ ಕ್ರಾಂತಿ’ ಕೃತಿ ಜನಾರ್ಪಣೆ, ‘ಜನರ ಕಡೆಗೆ ವೈಚಾರಿಕ ನಡಿಗೆ’ ಮೂಲಕ ಕುವೆಂಪು ವಿಚಾರಾಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೈಚಾರಿಕತೆ, ವೈಜ್ಞಾನಿಕತೆಯ ಬಗ್ಗೆ ಕುವೆಂಪು ಅವರಿಗೆ ಸ್ಪಷ್ಟ ದೃಷ್ಟಿಕೋನ ಇತ್ತು. ಜಾತಿ ತಾರತಮ್ಯ ಇಲ್ಲದ ಸಮಾಜ ಕುವೆಂಪು ಅವರ ಆಶಯವಾಗಿತ್ತು. ಆದರೆ, ಇಂದು ಶಿಕ್ಷಣ ಹೆಚ್ಚಿದಂತೆ ಮೌಢ್ಯ, ಕಂದಾಚಾರವೂ ಹೆಚ್ಚಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮಾತನಾಡಿ, ‘42ನೇ ತಿದ್ದುಪಡಿ ಮೂಲಕ ಸಮಾಜವಾದ, ಜಾತ್ಯತೀತ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಗಿತ್ತು. ಇದರ ವಿರುದ್ಧ 1975 ಮತ್ತು 2024ರಲ್ಲಿ ಕೆಲವರು ಸುಪ್ರೀಂಕೋರ್ಟ್ಗೆ ಹೋಗಿದ್ದರು. ಸಂವಿಧಾನದ ಆಶಯವೇ ಸಮಾಜವಾದ, ಜಾತ್ಯತೀತ ಆಗಿದೆ ಎಂದು ಎರಡು ಬಾರಿಯೂ ಅರ್ಜಿಗಳು ತಿರಸ್ಕೃತವಾಗಿದ್ದವು. ಈಗ ಮತ್ತೆ ಅದೇ ಕೂಗು ಎದ್ದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಹಂ.ಪ.ನಾಗರಾಜಯ್ಯ, ವಿಶ್ರಾಂತ ಕುಲಪತಿ ಡಾ.ಚಿದಾನಂದ ಗೌಡ, ಕೃತಿಯ ಸಂಪಾದಕ ಬರಗೂರು ರಾಮಚಂದ್ರಪ್ಪ, ಜನ ಪ್ರಕಾಶನದ ಬಿ. ರಾಜಶೇಖರಮೂರ್ತಿ, ಎಚ್.ಎನ್. ಹರಿ, ಎ.ವಿ. ಶ್ರೀಹರಿ ಉಪಸ್ಥಿತರಿದ್ದರು.

ಜನರಿಗೆ ಸಂವಿಧಾನದ ಸಾಕ್ಷರತೆ ಇಲ್ಲ. ಸರ್ಕಾರಿ ನೌಕರರಿಗೂ ವಿದ್ಯಾವಂತರಿಗೂ ಈ ಬಗ್ಗೆ ಅರಿವಿಲ್ಲ. ಹಾಗಾಗಿ ಸಂವಿಧಾನದ ಸಾಕ್ಷರತೆಗಾಗಿ ಒಂದು ಸಂಸ್ಥೆಯನ್ನು ಸರ್ಕಾರ ಹುಟ್ಟುಹಾಕಬೇಕು
ಎಚ್.ಎನ್. ನಾಗಮೋಹನದಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.