ಸೋಮವಾರ, ಆಗಸ್ಟ್ 8, 2022
21 °C

ಬೆನ್ಜ್ ಕಾರು ಕಂಪನಿ ಹೆಸರಿನಲ್ಲಿ ₹ 10 ಲಕ್ಷ ವಂಚನೆ

‌ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆನ್ಜ್ ಕಾರು ತಯಾರಿಕಾ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಎಂಜಿನಿಯರಿಂಗ್ ಪದವೀಧರರಿಂದ ₹10 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆಗೀಡಾಗಿರುವ ಕೆ.ಆರ್.ಪುರದ ಸುಕುಮಾರ್ ರೆಡ್ಡಿ ಮತ್ತು ಹರ್ಷವರ್ಧನ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಪ್ರಭುದೇವ್, ಮಹೇಶ್ ಕುಮಾರ್, ದೀಪಕ್ ಹಾಗೂ ಕಿರಣ್ ಕುಮಾರ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಿ.ಟೆಕ್ ಮುಗಿಸಿದ್ದ ಸುಕುಮಾರ್ ರೆಡ್ಡಿ ಮತ್ತು ಹರ್ಷವರ್ಧನ್, ಕೆಲಸಕ್ಕಾಗಿ ಜಾಲತಾಣವೊಂದರಲ್ಲಿ ಸ್ವ–ವಿವರ ಅಪ್‌ಲೋಡ್‌ ಮಾಡಿದ್ದರು. ಅದನ್ನು ತಿಳಿದುಕೊಂಡು ಅವರಿಬ್ಬರನ್ನು ಸಂಪರ್ಕಿಸಿದ್ದ ಆರೋಪಿಗಳು, ‘ಬೆನ್ಜ್ ಕಾರು ತಯಾರಿಕಾ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇವೆ. ಅದಕ್ಕಾಗಿ ಠೇವಣಿ ನೀಡಬೇಕು’ ಎಂದಿದ್ದರು.’

‘ಆರೋಪಿಗಳ ಮಾತು ನಂಬಿದ್ದ ದೂರುದಾರರು, ತಲಾ ₹5 ಲಕ್ಷ ಠೇವಣಿ ನೀಡಿದ್ದರು. ಹಣ ಪಡೆದ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು