ಬೆಂಗಳೂರು: ವಿಜಯನಗರ ಉಪ ವಿಭಾಗದ ಮಾಗಡಿ ರಸ್ತೆ, ಗೋವಿಂದರಾಜನಗರ ಹಾಗೂ ವಿಜಯನಗರ ಪೊಲೀಸ್ ಠಾಣೆಗಳಲ್ಲಿ ‘ಮಕ್ಕಳ ಸ್ನೇಹಿ ಕೊಠಡಿ’ ನಿರ್ಮಿಸಲಾಗಿದ್ದು, ಈ ಕೊಠಡಿಗಳು ಎಲ್ಲರ ಗಮನ ಸೆಳೆಯುತ್ತಿವೆ.

ಗೃಹ ಸಚಿವ ಜಿ.ಪರಮೇಶ್ವರ ಅವರ ಸೂಚನೆಯ ಮೇರೆಗೆ ಮೊದಲ ಹಂತದಲ್ಲಿ ನಗರದ ಮೂರು ಠಾಣೆಗಳಲ್ಲಿ ಮಕ್ಕಳ ಸ್ನೇಹಿ ಕೊಠಡಿ ನಿರ್ಮಿಸಲಾಗಿದೆ. ಹಂತಹಂತವಾಗಿ ಇನ್ನೂ ಕೆಲವು ಪೊಲೀಸ್ ಠಾಣೆಗಳಲ್ಲಿ ಈ ರೀತಿಯ ಕೊಠಡಿ ನಿರ್ಮಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

‘ಮಕ್ಕಳ ಮೇಲಿನ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕೊಠಡಿ ನಿರ್ಮಿಸಲಾಗಿದೆ. ಸಾರ್ವಜನಿಕರು ಮಕ್ಕಳ ಜತೆಗೆ ಠಾಣೆಗೆ ಭೇಟಿ ನೀಡುವ ಸಂದರ್ಭಗಳಲ್ಲಿ ಮಕ್ಕಳ ಗಮನ ಸೆಳೆಯುವ ವಾತಾವರಣ ನಿರ್ಮಿಸಲಾಗಿದೆ’ ಎಂದು ಹೇಳಿದರು.

ವಿಜಯನಗರ ಠಾಣೆಯ ಪಿಎಸ್ಐ ನೇತ್ರಾವತಿ, ಮಾಗಡಿ ರಸ್ತೆ ಠಾಣೆಯ ಪಿಎಸ್ಐ ಮಂಜುನಾಥ್, ಗೋವಿಂದರಾಜನಗರ ಠಾಣೆಯ ಪಿಎಸ್ಐ ಮಹೇಶ್ ಬ್ಯಾಕೋಡು ಅವರ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.