‘ಮಕ್ಕಳನ್ನು ವಿಡಿಯೊ ಗೇಮ್‌ನಿಂದ ದೂರವಿರಿಸಲು ಸೂಚನೆ’

7
ನಗರದ ಖಾಸಗಿ ಶಾಲೆಗಳಿಂದ ಪೋಷಕರಿಗೆ ಈ ಬಗ್ಗೆ ಸಲಹೆ

‘ಮಕ್ಕಳನ್ನು ವಿಡಿಯೊ ಗೇಮ್‌ನಿಂದ ದೂರವಿರಿಸಲು ಸೂಚನೆ’

Published:
Updated:

ಬೆಂಗಳೂರು: ‘ಮೊಬೈಲ್‌ ಹಾಗೂ ಎಲೆಕ್ಟ್ರಿಕ್‌ ಗ್ಯಾಜೆಟ್ಸ್‌ಗಳಿಂದ ಮಕ್ಕಳನ್ನು ದೂರವಿರಿಸಿ’–ಹೀಗೆಂದು ನಗರದಲ್ಲಿನ ಬಹುತೇಕ ಖಾಸಗಿ ಶಾಲೆಗಳು ಪೋಷಕರಿಗೆ ಸಲಹೆಗಳನ್ನು ನೀಡಲು ಪ್ರಾರಂಭಿಸಿವೆ.

ಡಿಜಿಟಲ್ ವಸ್ತುಗಳು ಹಾಗೂ ವಿಡಿಯೊ ಗೇಮ್‌ಗಳಿಗೆ ದಾಸರಾಗುವವರು ಮಾನಸಿಕ ಅಸ್ವಸ್ಥರು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದಾದ ಕೆಲವೇ ವಾರಗಳ ನಂತರ ಶಾಲೆಗಳು ಈ ಸಲಹೆ ನೀಡಲಾರಂಭಿಸಿವೆ.

ಒಂದು ನಿರ್ದಿಷ್ಟ ಸಮಯ ವಿಡಿಯೋ ಗೇಮ್ ಆಡಿ ಸುಮ್ಮನಾದರೆ ಅದು ವ್ಯಸನ ಎನಿಸಿಕೊಳ್ಳುವುದಿಲ್ಲ. ಆದರೆ ಓದು, ಗೆಳೆಯರು, ದಿನನಿತ್ಯದ ಕೆಲಸಗಳನ್ನು ಕಡೆಗಣಿಸುವಷ್ಟರಮಟ್ಟಿಗೆ ಅವಲಂಬಿತರಾಗಿದ್ದರೆ ವ್ಯಸನಕ್ಕೆ ಒಳಗಾಗಿದ್ದೀರಿ ಎಂದರ್ಥ.

ಬೆಥನಿ ಪ್ರೌಢಶಾಲೆ ನಿರ್ದೇಶಕರು ಎಲ್ಲಾ ಪೋಷಕರಿಗೂ ಪತ್ರ ಬರೆದಿದ್ದು, ‘ಮಕ್ಕಳು ಹೆಚ್ಚು ಸಮಯ ವಿಡಿಯೊ ಗೇಮ್‌ನಲ್ಲಿ ಕಳೆಯುತ್ತಿದ್ದರೆ, ಅದು ಮಕ್ಕಳಿಗೆ ಅಪಾಯಕಾರಿ. ಮಕ್ಕಳ ಭವಿಷ್ಯದ ಮೇಲೆ ಅದು ಬಹಳಷ್ಟು ಪರಿಣಾಮ ಬೀರಲಿದೆ’ ಎಂದು ಅದರಲ್ಲಿ ತಿಳಿಸಿದ್ದಾರೆ.

ಖಾಸಗಿ ಶಾಲೆಗಳ ಸಂಘಟನೆಯ ಡಿ. ಶಶಿಕುಮಾರ್‌, ‘ನಗರದ ಸಾಕಷ್ಟು ಶಾಲೆಗಳು ಈ ಕ್ರಮಕೈಗೊಂಡಿವೆ. ಬ್ಲಾಸಮ್‌ ಶಾಲೆಯೂ ಪೋಷಕರಿಗೆ ಈ ಬಗ್ಗೆ ಮಾರ್ಗಸೂಚಿಗಳನ್ನು ನೀಡಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !