ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಜ.11ರಿಂದ ಮಕ್ಕಳ ವಚನ ಮೇಳ

Last Updated 6 ಡಿಸೆಂಬರ್ 2022, 15:53 IST
ಅಕ್ಷರ ಗಾತ್ರ

ಬೆಂಗಳೂರು:ವಚನಜ್ಯೋತಿ ಬಳಗದ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಜ.10ರಿಂದ ಮೂರು ದಿನ ‘ಮಕ್ಕಳ ವಚನ ಮೇಳ’ ಆಯೋಜಿಸಲಾಗಿದೆ.

ರಾಜಧಾನಿಯಲ್ಲಿ ನಿರಂತರವಾಗಿ ಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ವಚನಜ್ಯೋತಿ,ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ದಿನ ಮಕ್ಕಳ ವಚನ ಸಂಭ್ರಮಾಚರಣೆಗೆ ಅವಕಾಶ ಮಾಡಿಕೊಟ್ಟಿದೆ.

ವಚನ ಗಾಯನ, ವಚನ ಪ್ರಬಂಧ, ವಚನ ವಿವೇಚನ, ವಚನ ಚಿತ್ರ, ವಚನ ರಸಪ್ರಶ್ನೆ, ವಚನ ನೃತ್ಯ, ವಚನ ರೂಪಕ, ವಚನ ವೇಷಭೂಷಣ, ವಚನ ಅಂತ್ಯಾಕ್ಷರಿ, ವಚನ ಕತೆ, ವಚನ ಕಂಠಪಾಠ, ಸಮೂಹ ವಚನಗಾಯನ... ಹೀಗೆ ಒಟ್ಟು 12 ಪ್ರಕಾರಗಳಲ್ಲಿ ವಚನ ಸ್ಪರ್ಧೆಗಳು ನಡೆಯಲಿವೆ. ಶಿಶುವಿಹಾರದಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕನ್ನಡದ ಸ್ವಯಾರ್ಜಿತ ಸ್ವತ್ತಾದ ವಚನಗಳನ್ನು ಹಾಡುತ್ತಾರೆ, ಬರೆಯುತ್ತಾರೆ, ವಿವೇಚಿಸುತ್ತಾರೆ, ಚಿತ್ರಿಸುತ್ತಾರೆ, ನರ್ತಿಸುತ್ತಾರೆ, ವೇಷಭೂಷಣಗಳ ಧರಿಸಿ ಸಂಭ್ರಮಿಸುತ್ತಾರೆ ಎಂದು ವಚನ ಜ್ಯೋತಿ ಬಳಗದ ಪಿನಾಕಪಾಣಿ ತಿಳಿಸಿದರು.

ರವೀಂದ್ರ ಕಲಾಕ್ಷೇತ್ರ ಮತ್ತು ಅದರ ಆವರಣದ ನಯನ ರಂಗಮಂದಿರ, ಸಂಸ ಬಯಲು ಮಂದಿರ, ವಿಶ್ರಾಂತಿ ಕೊಠಡಿ, ಆರ್ಟ್ ಗ್ಯಾಲರಿ, ತಾಲೀಮು ವೇದಿಕೆ ಸೇರಿದಂತೆ ಎಂಟು ವೇದಿಕೆಗಳಲ್ಲಿ ‘ಮಕ್ಕಳ ವಚನ ಮೇಳ’ ನಡೆಯಲಿದೆ. ವಚನಗಳ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ಇದು ಎಂದರು.

ಶಿಶುವಿಹಾರದ ಮಕ್ಕಳು, 1, 2 ತರಗತಿ, 3 ಮತ್ತು 4ನೇ ತರಗತಿ, 5, 6 ಮತ್ತು 7ನೇ ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಂಬುದಾಗಿ ಐದು ವಿಭಾಗಗಳನ್ನು ವಿಂಗಡಿಸಲಾಗಿದೆ. ಗೂಗಲ್ ಫಾರ್ಮ್‌, ವಾಟ್ಸ್‌ ಆ್ಯಪ್‌ ಮತ್ತು ಇ–ಮೇಲ್‌ಗಳ ಮೂಲಕ ಮಕ್ಕಳ ವಚನ ಮೇಳಕ್ಕೆ ಶಾಲೆಗಳಿಂದ ಮತ್ತು ವೈಯಕ್ತಿಕವಾಗಿ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ: 9845184267.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT