ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೇರ್‌ಚಾಟ್‌’ನಲ್ಲಿ ಕಮಿಷನರ್‌

Last Updated 25 ಜುಲೈ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ವಾಟ್ಸ್‌ಆ್ಯಪ್‌, ಫೇಸ್‌ ಬುಕ್‌, ಟ್ವಿಟರ್‌ ಮೂಲಕ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿರುವ ನಗರ ಪೊಲೀಸರು, ‘ಶೇರ್‌ಚಾಟ್‌’ನಲ್ಲೂ ಖಾತೆ ತೆರೆದಿದ್ದಾರೆ.

ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಕಮಿಷನರ್‌ ಅಲೋಕ್ ಕುಮಾರ್ ಗುರುವಾರ ಖಾತೆಗೆ ಚಾಲನೆ ನೀಡಿದರು.

‘ಕನ್ನಡದಲ್ಲೂ ಆಯ್ಕೆಯಿರುವ (@blrcitypolice#ಬೆಂಗಳೂರು ನಗರ ಪೊಲೀಸ್‌) ಖಾತೆ ತೆರೆದು ಜನರಿಗೆ ಹತ್ತಿರವಾಗುತ್ತಿದ್ದೇವೆ’ಎಂದು ಅಲೋಕ್‌ ಕುಮಾರ್‌ ಹೇಳಿದರು.

ಏನಿದು ‘ಶೇರ್‌ಚಾಟ್‌’ ಆ್ಯಪ್

ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ಚಾಟ್‌ ಆ್ಯಪ್ ಲಭ್ಯಇದೆ. ಅದನ್ನು ಪ್ಲೇ ಸ್ಟೋರ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ಖಾತೆ ತೆರೆಯಬೇಕು. ಬಳಿಕ @blrcitypolice # ಬೆಂಗಳೂರು ನಗರ ಪೊಲೀಸ್ ಖಾತೆ ಫಾಲೊ ಮಾಡಬೇಕು. ವೈಯಕ್ತಿಕ ಹಾಗೂ ಸಾರ್ವಜನಿಕವಾಗಿಯೂ ದೂರು ಅಥವಾ ಸಲಹೆ, ಸೂಚನೆಗಳನ್ನು ಇದರ ಮೂಲಕ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT