ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆಯಲ್ಲೇ ಇದ್ದಿದ್ದರೆ ಗೆಳತಿ ಉಳಿಯುತ್ತಿದ್ದಳು’

ಮಾಲ್‌ ಕಟ್ಟಡದಿಂದ ಬಿದ್ದು ಯುವತಿ ಸಾವು: ಸ್ನೇಹಿತನ ಹೇಳಿಕೆ ಪಡೆದ ಪೊಲೀಸರು
Last Updated 21 ಮೇ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಿಗೇಡ್ ರಸ್ತೆಯಲ್ಲಿರುವ ‘5 ಅವೆನ್ಯೂ’ ಮಾಲ್‌ ಕಟ್ಟಡದ ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದು ಲಿಯಾ (20) ಮೃತಪಟ್ಟ ಪ್ರಕರಣ ಸಂಬಂಧ, ಸ್ನೇಹಿತ ಕ್ರಿಸ್ ಪೀಟರ್‌ ಅವರಿಂದ ಪೊಲೀಸರು ಹೇಳಿಕೆ ಪಡೆದಿದ್ದಾರೆ.

‘ಬೇಜಾರು ಆಯಿತೆಂದು ಮಾಲ್‌ಗೆ ಬಂದು ಗೆಳತಿ ಕಳೆದುಕೊಂಡೆ. ಮನೆಯಲ್ಲೇ ಇದ್ದಿದ್ದರೆ, ಗೆಳತಿ ಉಳಿಯುತ್ತಿದ್ದಳು’ ಎಂದು ಕ್ರಿಸ್ ಪೀಟರ್‌ ಹೇಳಿಕೆಯಲ್ಲಿ ಹೇಳಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಲಿಯಾ ಅವರನ್ನು ರಕ್ಷಿಸಲು ಹೋಗಿ ಪೀಟರ್‌ ಸಹ ಕಟ್ಟಡದಿಂದ ಬಿದ್ದಿದ್ದರು. ಅವರ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಹೇಗಾಯಿತು ಎಂಬ ಬಗ್ಗೆ ಅವರಿಂದ ಹೇಳಿಕೆ ಪಡೆಯಲಾಗಿದೆ. ಸಾವಿನ ಬಗ್ಗೆ ಕೆಲ ಅನುಮಾನಗಳಿದ್ದು, ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.

ಹೇಳಿಕೆ ವಿವರ: ‘ನಾನು ಹಾಗೂ ಲಿಯಾ, ಬಿ.ಕಾಂ ಪದವಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೆವು. ಇಬ್ಬರೂ ಪರಸ್ಪರ ಇಷ್ಟಪಡುತ್ತಿದ್ದೆವು. ಸಲುಗೆಯೂ ಇತ್ತು. ಎಲ್ಲಾದರೂ ಹೋಗುವುದಿದ್ದರೆ, ಇಬ್ಬರೂ ಒಟ್ಟಿಗೇ ಹೋಗುತ್ತಿದ್ದೆವು’ ಎಂದು ಪೀಟರ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ಕಾಲೇಜಿಗೆ ಶನಿವಾರ ರಜೆ ಇತ್ತು. ಜೊತೆಗೆ, ಸ್ನೇಹಿತರೊಬ್ಬರ ಹುಟ್ಟುಹಬ್ಬದ ಸಲುವಾಗಿ ಎಂ.ಜಿ.ರಸ್ತೆಯ ಪಬ್‌ನಲ್ಲಿ ಸಂಜೆ ಪಾರ್ಟಿಯನ್ನೂ ಆಯೋಜಿಸಲಾಗಿತ್ತು. ಪಾರ್ಟಿಗೆ ಒಟ್ಟಿಗೆ ಹೋಗಬೇಕೆಂದು ನಾವಿಬ್ಬರೂ ಮಾತನಾಡಿಕೊಂಡಿದ್ದೆವು. ಇಬ್ಬರೂ ಸೇರಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬ್ರಿಗೇಡ್ ರಸ್ತೆಗೆ ಬಂದಿದ್ದೆವು. ಸಂಜೆಯವರೆಗೂ ಶಾಪಿಂಗ್ ಮಾಡಿ, ನಂತರ ಪಾರ್ಟಿಗೆ ಹೋಗಲು ಯೋಚಿಸಿದ್ದೆವು’ ಎಂದೂ ಪೀಟರ್‌ ತಿಳಿಸಿದ್ದಾರೆ.

‘ಕೆಲ ವಸ್ತುಗಳನ್ನು ಖರೀದಿಸಲೆಂದು ನಾವಿಬ್ಬರು, ‘5 ಅವೆನ್ಯೂ’ ಮಾಲ್‌ಗೆ ಹೋಗಿದ್ದೆವು. ಮಾಲ್‌ ಕೆಳ ಮಹಡಿಯಲ್ಲೇ ಖರೀದಿಸಿದ್ದ ಜ್ಯೂಸ್ ಕುಡಿಯುತ್ತ ಮಾಲ್‌ನಲ್ಲಿ ಓಡಾಡುತ್ತಿದ್ದೆವು. ಎರಡನೇ ಮಹಡಿಯಲ್ಲಿ ಇರುವಾಗ ಜ್ಯೂಸ್ ಬಾಟಲಿ ಕೈಯಲ್ಲಿ ಹಿಡಿದುಕೊಂಡೇ ಲಿಯಾ ಆಯತಪ್ಪಿ ಬಿದ್ದಳು. ಅವಳನ್ನು ಹಿಡಿದುಕೊಳ್ಳಲು ಹೋಗಿ ನಾನು ಬಿದ್ದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT