ಸೋಮವಾರ, ಸೆಪ್ಟೆಂಬರ್ 16, 2019
27 °C

ಮುನಿರತ್ನ ವಿರುದ್ಧದ ದೂರು ವಾಪಸು

Published:
Updated:

ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮುನಿರತ್ನ ವಿರುದ್ಧ ಮತದಾರರ ನಕಲಿ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಬೇಕು ಎಂದು ಕೋರಿ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ದಾಖಲಿಸಿದ್ದ ಖಾಸಗಿ ದೂರನ್ನು, ದೂರುದಾರ ಎನ್‌.ರಾಕೇಶ್‌ ಹಿಂಪಡೆದಿದ್ದಾರೆ.

ಈ ಕುರಿತಂತೆ, ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ಕ್ಕೆ ರಾಕೇಶ್‌ ಪರ ವಕೀಲರು ಶನಿವಾರ‌ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ‘ದೂರುದಾರರು ಈ ರೀತಿ ಅರ್ಜಿ ಹಿಂಪಡೆಯುತ್ತಿರುವುದು ಕಾನೂನಿನ ದುರುಪಯೋಗ ಮಾಡಿದಂತೆ. ಅಲ್ಲದೆ, ಕೋರ್ಟ್‌ ಸಮಯವನ್ನು ವ್ಯರ್ಥಗೊಳಿಸಿದಂತಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾಲಹಳ್ಳಿ ಅಪಾರ್ಟ್‌ಮೆಂಟ್‌ವೊಂದರಲ್ಲಿ 2018ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ 10 ಸಾವಿರಕ್ಕೂ ಹೆಚ್ಚು ನಕಲಿ ಗುರುತಿನ ಚೀಟಿ ಪತ್ತೆಗೆ ಸಂಬಂಧಿಸಿದ ಪ್ರಕರಣವಿದು.

Post Comments (+)