ಇರ್ಷಾದ್‌ ಉಲ್ಲಾ ಖಾನ್‌ ವಿರುದ್ಧ ದೂರು

7
ಯುವತಿಯನ್ನು ಬಲವಂತವಾಗಿ ಇಟ್ಟುಕೊಂಡ ಆರೋಪ

ಇರ್ಷಾದ್‌ ಉಲ್ಲಾ ಖಾನ್‌ ವಿರುದ್ಧ ದೂರು

Published:
Updated:

ಬೆಂಗಳೂರು: ಗುಜರಾತ್‌ ಮೂಲದ ಹಿಂದೂ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿ, ಮದುವೆಯಾದ ಆರೋಪಕ್ಕೆ ಒಳಗಾಗಿರುವ ನಾಸಿರ್‌ ಖಾನ್‌ ಜೊತೆ ಸಂಪರ್ಕ ಹೊಂದಿದ್ದರೆನ್ನಲಾದ ವಾಣಿಜ್ಯ ಇಲಾಖೆ ಕಲಬುರಗಿ ಉಪ ಆಯುಕ್ತ ಇರ್ಷಾದ್‌ ಉಲ್ಲಾ ಖಾನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಘಪರಿವಾರ ಹಾಗೂ ಭಜರಂಗ ದಳದ ಕಾರ್ಯಕರ್ತರು ವಾಣಿಜ್ಯ ಇಲಾಖೆ ಕಮಿಷನರ್‌ಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

‘ನಾಸೀರ್‌ ಖಾನ್‌, ಮದುವೆಯಾಗುವ ಮೊದಲು ಬೆಂಗಳೂರಿನ ಜೆ.ಬಿ ನಗರದಲ್ಲಿರುವ ಇರ್ಷಾದ್ ಖಾನ್‌ ಅವರ ಮನೆಯಲ್ಲಿ  ಯುವತಿಯನ್ನು ಇಟ್ಟಿದ್ದರು’ ಎಂಬ ಆರೋಪದ ಹಿನ್ನೆಲೆ ಯಲ್ಲಿ ಎನ್‌ಐಎ ಅಧಿಕಾರಿಗಳು ಜೂನ್‌ 6ರಂದು ಈ ಅಧಿಕಾರಿಯ ಪತ್ನಿಯನ್ನು ವಿಚಾರಣೆ ಮಾಡಿದ್ದರು. ಅಲ್ಲದೆ, ಅವರ ಮನೆಯಿಂದ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ವಶಪಡಿಸಿಕೊಂಡಿದ್ದರು.

ವಾಣಿಜ್ಯ ಕಮಿಷನರ್‌ ಕಚೇರಿಗೆ ಬಂದಿದ್ದ ಸುಮಾರು ಸಂಘಪರಿವಾರದ ಸದಸ್ಯರ ನಿಯೋಗ ನಾಸಿರ್‌ ಖಾನ್‌ ಅವರ ಜೊತೆ ಸಂಪರ್ಕ ಹೊಂದಿರುವ ಇರ್ಷಾದ್‌ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಒತ್ತಾಯಿಸಿದರು. ಕಮಿಷನರ್‌ ಅವರ ಅನುಪಸ್ಥಿತಿಯಲ್ಲಿ ಕಿರಿಯ ಅಧಿಕಾರಿಗಳು ಮನವಿ ಸ್ವೀಕರಿಸಿದರು.

ಒಳ್ಳೆಯ ಕುಟುಂಬ: ಇರ್ಷಾದ್‌ ಖಾನ್‌ ಅವರದ್ದು ಒಳ್ಳೆಯ ಕುಟುಂಬ. ಅವರು ಸಮಾಜಘಾತುಕ ಶಕ್ತಿಗಳಿಗೆ ಆಶ್ರಯ ನೀಡಿರುವ ಸಾಧ್ಯತೆಯೇ ಇಲ್ಲ. ಬಹಳ ವರ್ಷದಿಂದ ಈ ಕುಟುಂಬ ನನಗೆ ಪರಿಚಯವಿದೆ. ಆದರೆ, ಈ ಬಗ್ಗೆ ಮುಕ್ತ ತನಿಖೆ ನಡೆಸುವುದಕ್ಕೆ ಎನ್‌ಐಎ ಸ್ವತಂತ್ರವಾಗಿದೆ ಎಂದು ರಾಜ್ಯ ವಾಣಿಜ್ಯ ಇಲಾಖೆ ಅಧಿಕಾರಿಗಳ ಸಂಘದ ಅಧ್ಯಕ್ಷ ಸಿ.ಎನ್‌. ಶಿವಪ್ರಕಾಶ್‌ ತಿಳಿಸಿದ್ದಾರೆ.

ನಾಸಿರ್‌ ಖಾನ್‌ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಓದುತ್ತಿದ್ದಾಗ ಯುವತಿ ಪರಿಚಯವಾಗಿತ್ತು. ಆನಂತರ ಅವರನ್ನು ಬಲವಂತವಾಗಿ ಮದುವೆಯಾಗಿದ್ದರು. ಅವರನ್ನು ಸೌದಿಗೆ ಕರೆದೊಯ್ದಿದ್ದರು.

ಅಲ್ಲಿಂದ ಐಎಸ್‌ಗೆ (ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆ) ಸೇರಿಸುವ ಯೋಜನೆ ಮಾಡಿದ್ದರೆಂದು ಆರೋಪಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !