ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಜೆಸ್ಟಿಕ್ ತಲುಪಿದ‌ ಪಾದಯಾತ್ರೆ: ಸುತ್ತಮುತ್ತ ವಿಪರೀತ ದಟ್ಟಣೆ

Last Updated 3 ಮಾರ್ಚ್ 2022, 10:13 IST
ಅಕ್ಷರ ಗಾತ್ರ


ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ಮೆಜೆಸ್ಟಿಕ್ ತಲುಪಿದ್ದು, ಸುತ್ತಮುತ್ತಲಿನ ರಸ್ತೆಗಳಲ್ಲಿ ವಿಪರೀತ ದಟ್ಟಣೆ ಉಂಟಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಪಾದಯಾತ್ರೆ ಬಸವನಗುಡಿಯತ್ತ ಹೊರಟಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಮಲ್ಲೇಶ್ವರ, ರಾಜಾಜಿನಗರ, ಓಕಳಿಪುರ, ಗಾಂಧಿನಗರ, ಮಾಗಡಿ ರಸ್ತೆ, ಶೇಷಾದ್ರಿಪುರ ಹಾಗೂ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಂತಿವೆ.

ಹಲವೆಡೆ ಮಾರ್ಗ ವಾಹನಗಳ ಬದಲಾವಣೆ ‌ಮಾಡಿರುವ‌ ಪೊಲೀಸರು, ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್ ನಿಲ್ಲಿಸಿದ್ದಾರೆ. ಬ್ಯಾರಿಕೇಡ್ ಎದುರು ವಾಹನಗಳ ಸಾಲು ದೊಡ್ಡದಿದೆ.

ಪಾದಯಾತ್ರೆ‌‌ ಮುಂದಕ್ಕೆ ಹೋದಂತೆ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ದಟ್ಟಣೆಯಲ್ಲಿ ಬಿಎಂಟಿಸಿ ಬಸ್‌ಗಳು ಸಿಲುಕಿದ್ದು, ಪ್ರಯಾಣಿಕರು ಮಾರ್ಗಮಧ್ಯೆಯೇ ಇಳಿದು ನಡೆದುಕೊಂಡು ಹೊರಟಿದ್ದಾರೆ.
ಪಾದಯಾತ್ರೆ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನ ತಲುಪುವವರೆಗೂ ದಟ್ಟಣೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT