ಕನ್ನಡ ಭೂವಿಜ್ಞಾನ ಪ್ರಾಣಿಶಾಸ್ತ್ರ ಜಾನಪದ ಹಾಗೂ ಇತಿಹಾಸ ವಿಭಾಗಗಳಲ್ಲಿರುವ ವಸ್ತು ಸಂಗ್ರಹಾಲಯಗಳ ನವೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಯೋಗಾಲಯ ಕಟ್ಟಡದ ನವೀಕರಣ ಜೊತೆಗೆ ಉಪಕರಣಗಳನ್ನು ಖರೀದಿಸಲಾಗುತ್ತದೆ.
ಎಸ್.ಎಂ. ಜಯಕರ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ
ಶೈಕ್ಷಣಿಕ ಕ್ಷೇತ್ರದ ಮುಂದಿನ 25 ವರ್ಷಗಳಿಗೆ ಬೇಕಾಗುವ ಮೂಲಸೌಕರ್ಯಗಳನ್ನು ಪಿಎಂ ಉಷಾ ಯೋಜನೆಯಡಿ ನಿರ್ಮಿಸಲಾಗುತ್ತಿದೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಸಿಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಲಭ್ಯವಾಗಲಿವೆ.