ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ತಾತ್ಕಾಲಿಕ ನಿಲುಗಡೆ ಮುಂದುವರಿಕೆ

Published 15 ಏಪ್ರಿಲ್ 2024, 16:32 IST
Last Updated 15 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ಬೀರೂರು ಮತ್ತು ರಾಮಗಿರಿ ನಿಲ್ದಾಣಗಳಲ್ಲಿ ಇದ್ದ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದಿನ ಆರು ತಿಂಗಳವರೆಗೆ ನೈರುತ್ಯ ರೈಲ್ವೆ ಮುಂದುವರಿಸಿದೆ. ದೇವನಗೊಂದಿ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ.

ವಿಜಯಪುರ–ಮಂಗಳೂರು ನಡುವೆ ನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು ಬೀರೂರು ನಿಲ್ದಾಣದಲ್ಲಿ 2 ನಿಮಿಷ ನಿಲ್ಲುವ ವ್ಯವಸ್ಥೆ ತಾತ್ಕಾಲಿಕವಾಗಿತ್ತು.  ಯಶವಂತಪುರ-ಸಿಂಧನೂರು ನಿಲ್ದಾಣಗಳ ನಡುವೆ ನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ರಾಮಗಿರಿ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ವ್ಯವಸ್ಥೆ ತಾತ್ಕಾಲಿಕವಾಗಿ ಇತ್ತು. ಏ.16ರವರೆಗೆ ಇದ್ದ ಈ ಅವಧಿಯನ್ನು ಅ.16ರವರೆಗೆ ವಿಸ್ತರಿಸಲಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಮಾರಿಕುಪ್ಪಂ ನಿಲ್ದಾಣಗಳ ನಡುವೆ ಸಂಚರಿಸುವ ಮೆಮು ಸ್ಪೆಷಲ್ ರೈಲು ಮತ್ತು ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ನಡುವೆ ನಿತ್ಯ ಸಂಚರಿಸುವ ಮೆಮು ಎಕ್ಸ್‌ಪ್ರೆಸ್‌ ರೈಲುಗಳಿಗೆ ದೇವನಗೊಂದಿ ನಿಲ್ದಾಣದಲ್ಲಿ ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಜುಲೈ 16ರ ವರೆಗೆ ಮುಂದುವರಿಸಲಾಗಿದೆ.

ವಿಶೇಷ ರೈಲುಗಳ ಸಂಚಾರ ಮುಂದುವರಿಕೆ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯಾಗದಂತೆ ತಡೆಯಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ದಾನಾಪುರ ನಿಲ್ದಾಣಗಳ (ಬಿಹಾರ) ನಡುವೆ ಚಲಿಸುವ ಹತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯನ್ನು ಅಸ್ತಿತ್ವದಲ್ಲಿರುವ ಮಾರ್ಗ, ನಿಲುಗಡೆ ಮತ್ತು ಸಮಯದೊಂದಿಗೆ ಜುಲೈವರೆಗೆ ಮುಂದುವರಿಸಲು ಪೂರ್ವ ಮಧ್ಯ ರೈಲ್ವೆ ವಲಯ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT