ಬುಧವಾರ, ಮೇ 27, 2020
27 °C

25 ಲಕ್ಷ ಮೊಬೈಲ್‌ಗಳಿಗೆ ಕೊರೊನಾ ಜಾಗೃತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಕುರಿತು ಜನಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ರಚಿಸಿರುವ ಸೋಷಿಯಲ್ ಮೀಡಿಯಾ ಕಾರ್ಯಪಡೆ 24X7 ಸಕ್ರಿಯವಾಗಿದ್ದು, ವಾಟ್ಸ್ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ಮೂಲಕ ನಿತ್ಯ 25 ಲಕ್ಷಕ್ಕೂ ಹೆಚ್ಚು ಜನರ ಮೊಬೈಲ್ ತಲುಪುತ್ತಿದೆ!

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ನೇತೃತ್ವದ ಈ ತಂಡದ ಬೆನ್ನಿಗೆ ಆರೋಗ್ಯ, ಡಿಐಪಿಆರ್‌, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬಿಟಿಪಿ, ಬಿಬಿಎಂಪಿ, ಕಾರ್ಮಿಕ, ಆರ್‌ಡಿಪಿಆರ್‌ ಇಲಾಖೆಗಳಿದ್ದು, ಚುಕ್ಕಿ ಟಾಕೀಸ್‌ನ ಸುಷ್ಮಾ, ದಿಶಾ ಕಮ್ಯುನಿಕೇಷನ್‌ನ
ಗೀತಾ ಚವ್ಹಾಣ‌್, ಸೈಡ್‌ ಅಪ್ ತಂಡದ ವಿನೋದ್‌, ಸನ್ನಿ, ರೆಬೆಕ್ಕಾದ ಬಾಲಸುಬ್ರಹ್ಮಣ್ಯಮ್‌ ಅವರನ್ನೊಳಗೊಂಡ ಕ್ರಿಯೇಟಿವ್‌ ತಂಡವಿದೆ.

ರಾಜ್ಯ– ಕೇಂದ್ರ ಸರ್ಕಾರಗಳ ಸುತ್ತೋಲೆ, ಮಾರ್ಗಸೂಚಿ, ಎಚ್ಚರಿಕೆ ಹಾಗೂ ಜಾಗೃತಿ ಮಾಹಿತಿಗಳನ್ನು ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದಿಸಿ, ದೃಶ್ಯ– ಶ್ರಾವ್ಯ ರೂಪ ನೀಡಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಡುತ್ತಿದೆ.

ಎಲ್ಲ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿರುವ, 6 ಸಾವಿರಕ್ಕೂ ಹೆಚ್ಚು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿರುವ, ನೌಕರರ ಸಂಘಟನೆಗಳು– ಸಂಸ್ಥೆಗಳ ಸದಸ್ಯರಿರುವ ಹಾಗೂ ವಿವಿಧ ಇಲಾಖೆಗಳ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಈ ತುಣುಕುಗಳನ್ನು ವೈರಲ್‌ ಮಾಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು