ಸೋಮವಾರ, ಅಕ್ಟೋಬರ್ 25, 2021
24 °C

ಪರಿವರ್ತನೆಗಾಗಿ ಲಸಿಕೆ: ಮಂಗಳಮುಖಿಯರೆಲ್ಲರಿಗೂ ಉಚಿತ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಮಾನ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್ ಮತ್ತು ಕಿನೀರ್ ಸರ್ವೀಸಸ್ ಸೇರಿ 'ಪರಿವರ್ತನ್ ಕಾ ಟೀಕಾ'ವನ್ನು ಘೋಷಿಸಿದೆ. ಇದರಡಿಯಲ್ಲಿ ರಾಷ್ಟ್ರವ್ಯಾಪಿ ಮುಂದಿನ ಆರು ತಿಂಗಳಲ್ಲಿ ಭಿನ್ನಲಿಂಗಿ ಸಮುದಾಯದ ಎಲ್ಲಾ ಸದಸ್ಯರಿಗೆ ಉಚಿತ ಲಸಿಕೆ ಒದಗಿಸಲು ಯೋಜಿಸಲಾಗಿದೆ.

ಕಿನೀರ್ ಅಪೊಲೊ ಹಾಸ್ಪಿಟಲ್ಸ್ ಮತ್ತು ಎನ್‌ಜಿಒಗಳ 200 ಕೇಂದ್ರಗಳಲ್ಲಿ ಶಿಬಿರಗಳನ್ನು ಆಯೋಜಿಸಲಿದ್ದು, ತಮ್ಮ ಪ್ರದೇಶದಲ್ಲಿನ ಆಯ್ದ ಲಸಿಕಾ ಶಿಬಿರದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. 

ವಿಲ್ಲೂ ಪೂನವಾಲಾ ಚಾರಿಟೇಬಲ್ ಫೌಂಡೇಶನ್‌ನ ಸಿಇಓ ಜಸ್ವಿಂದರ್ ನಾರಂಗ್ ಮಾತನಾಡಿ, 'ದೇಶದಲ್ಲಿ ಭಿನ್ನಲಿಂಗಿ ಸಮುದಾಯಕ್ಕೆ ಸಮಾನ ಅವಕಾಶಗಳನ್ನು ಒದಗಿಸುವಲ್ಲಿ ಲಕ್ಷ್ಮಿ ನಾರಾಯಣ್ ತ್ರಿಪಾಠಿ ಹಾಗೂ ಕಿನೀರ್ ಸರ್ವೀಸಸ್ ಸಹಕರಿಸುತ್ತಿರುವುದು ನಮಗೆ ಸಂತೋಷ ತಂದಿದೆ. ಪ್ರತಿಯೊಬ್ಬರಿಗೂ ಸಂಪೂರ್ಣವಾಗಿ ಲಸಿಕೆ ಮತ್ತು ಪ್ರತಿರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು. ಲಸಿಕೆ ಲಭ್ಯವಾಗುವಂತೆ ಮತ್ತು ಕೈಗೆಟುಕುವಂತೆ ಮಾಡುವುದೇ ಈ ಯೋಜನೆಯ ಗುರಿಯಾಗಿದ್ದು, ಇದು ಎಲ್ಲರಿಗೂ ಸಮಗ್ರ ಆರೋಗ್ಯ ರಕ್ಷಣೆಯ ಉದ್ದೇಶ ಹೊಂದಿದೆ' ಎಂದು ಹೇಳಿದರು. 

ಕಿನೀರ್ ಸರ್ವೀಸಸ್‌ನ ಲಕ್ಷ್ಮಿ ತ್ರಿಪಾಠಿ ಮಾತನಾಡಿ, 'ಲಸಿಕೆಗಳನ್ನು ಭಿನ್ನಲಿಂಗಿ ಸಮುದಾಯಕ್ಕೆ ನ್ಯಾಯಸಮ್ಮತವಾಗಿ ಮತ್ತು ಲಭ್ಯವಿರುವಂತೆ ಮಾಡುವಲ್ಲಿ ವಿಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್‌ ನೀಡಿದ ಬೆಂಬಲದಿಂದ ಸಂತೋಷವಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನವಾಗಿದೆ. ನಮ್ಮೊಂದಿಗೆ ಕೈಜೋಡಿಸಿದ್ದಕ್ಕಾಗಿ ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್‌ಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು' ಎಂದು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು