ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಬಾಲಕನಿಗೆ ಪಾರ್ಶ್ವವಾಯು

Last Updated 2 ಡಿಸೆಂಬರ್ 2020, 23:34 IST
ಅಕ್ಷರ ಗಾತ್ರ

ಬೆಂಗಳೂರು: ಪಾರ್ಶ್ವವಾಯು ಮಾದ ರಿಯ ಅನಾರೋಗ್ಯ ಸಮಸ್ಯೆಗೆ ಒಳಗಾದ ಆರೂವರೆ ವರ್ಷದ ಬಾಲಕನಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಆ್ಯಂಟಿ ಬಾಡಿ ಪರೀಕ್ಷೆ ನಡೆಸಲಾಗಿದ್ದು, ಆತನಿಗೆ ಈ ಮೊದಲು ಕೋವಿಡ್ ಬಂದು ಹೋಗಿದೆ ಎನ್ನುವುದು ದೃಢಪಟ್ಟಿದೆ. ಇದರಿಂದಾಗಿ ಹಲವು ಮಕ್ಕಳಿಗೆ ಸೋಂಕು ತಗುಲಿರುವ ಸಾಧ್ಯತೆಯಿದೆ ಎಂದು ವೈದ್ಯರು ಸಂದೇಹ ವ್ಯಕ್ತಪಡಿಸಿದ್ದಾರೆ.

ಸತತ ಮೂರು ದಿನಗಳು ಜ್ವರದಿಂದ ಬಳಲಿ, ಆರೋಗ್ಯ ಹದಗೆಟ್ಟ ಬಳಿಕ ಬಾಲಕನನ್ನು ಪಾಲಕರು ಪ್ರಕ್ರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆತನಿಗೆ ಮಾತನಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ದೇಹದ ಮೇಲೆ ದದ್ದುಗಳು ಕಾಣಿಸಿಕೊಂಡಿದ್ದವು. ಕೋವಿಡ್ ಪರೀಕ್ಷೆ ನಡೆಸಿದಾಗ ಬಾಲಕ ಸೋಂಕಿತನಾಗಿಲ್ಲ ಎನ್ನುವುದು ದೃಢಪಟ್ಟಿತು. ಆದರೆ, ಆತನಲ್ಲಿ ಅಭಿವೃದ್ಧಿಯಾಗಿರುವ ಪ್ರತಿಕಾಯವನ್ನು ಆಧರಿಸಿ ಈ ಮೊದಲು ಬಾಲಕನಲ್ಲಿ ಸೋಂಕು ಕಾಣಿಸಿ ಕೊಂಡಿತ್ತು. ಅದರಿಂದಾಗಿಯೇ ಪಾರ್ಶ್ವವಾಯು ಮಾದರಿಯ ಸಮಸ್ಯೆ ಉದ್ಭವಿಸಿದೆ ಎಂದು ವೈದ್ಯರು ನಿರ್ಧರಿಸಿದ್ದಾರೆ.

‘ಬಾಲಕನ ರಕ್ತದೊತ್ತಡ ವೇಗವಾಗಿ ಇಳಿಯುತ್ತಿತ್ತು. ಆತನ ಸ್ಥಿತಿಯನ್ನು ನೋಡಿ ರೋಗ ನಿರ್ಣಯಿಸುವುದು ಸವಾಲಾಗಿತ್ತು. ಆ್ಯಂಟಿ ಬಾಡಿ ಪರೀಕ್ಷೆಯನ್ನು ನಡೆಸಿದ ಬಳಿಕ ಕೊರೊನಾ ಸೋಂಕು ಈ ಮೊದಲು ದಾಳಿ ನಡೆಸಿದೆ ಎನ್ನುವುದು ಖಚಿತವಾಯಿತು. ಹೆಚ್ಚಿನ ಮಕ್ಕಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ಸರಿಯಾಗಿ ರೋಗ ಪತ್ತೆ ಮಾಡದಿದ್ದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ’ ಎಂದು ಮಕ್ಕಳ ತಜ್ಞ
ಡಾ. ಅರುಣ ಥಾಮಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT