ಸೋಮವಾರ, ಜನವರಿ 25, 2021
19 °C

ಕೋವಿಡ್‌ ಲಸಿಕೆ ದಾಸ್ತಾನು: ಸಿದ್ಧತೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 1.71 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದಾಸಪ್ಪ ಆಸ್ಪತ್ರೆಯ ಲಸಿಕೆ ದಾಸ್ತಾನು ಕೇಂದ್ರಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಸೋಮವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

ಲಸಿಕಾ ಕೇಂದ್ರಗಳಿಗೆ ಅವುಗಳನ್ನು ಕೊಂಡೊಯ್ಯಲು ಮಾಡಿಕೊಂಡಿರುವ ಸಿದ್ಧತೆಗಳು ಹಾಗೂ ಲಸಿಕೆ ನೀಡುವ ವಿಧಾನದ ಬಗ್ಗೆಯೂ ಅವರು ಮಾಹಿತಿ ಪಡೆದರು.

‘ಪ್ರತಿಯೊಂದು ಐಸ್‌ಲೈನ್ ರೆಫ್ರಿಜರೇಟರ್‌ನಲ್ಲಿ ಲಸಿಕೆಗಳ 45 ಸಾವಿರ ಡೋಸ್‌ಗಳನ್ನು ದಾಸ್ತಾನು ಇಡಬಹುದು. ದಾಸಪ್ಪ ಆಸ್ಪತ್ರೆಯಲ್ಲಿ 9 ಐಸ್‌ಲೈನ್ ರೆಫ್ರಿಜರೇಟರ್‌ಗಳಿವೆ. 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋಲ್ಡ್ ಚೈನ್ ಪಾಯಿಂಟ್‌ಗಳಿದ್ದು, ಅಲ್ಲಿಯೂ ಐಸ್‌ಲೈನ್ ರೆಫ್ರಿಜರೇಟರ್‌ಗಳಿವೆ. ಲಸಿಕೆ ಮುಖ್ಯ ಉಗ್ರಾಣ ಕೇಂದ್ರಕ್ಕೆ ತಲುಪಿದ ದಿನವೇ ಅವುಗಳನ್ನು ಕೋಲ್ಡ್ ಬಾಕ್ಸ್‌ಗಳಲ್ಲಿರಿಸಿ ಎಲ್ಲ 141 ಕೋಲ್ಡ್ ಚೈನ್ ಪಾಯಿಂಟ್‌ಗಳಿಗೆ ವಾಹನಗಳ ಮೂಲಕ ಸಾಗಾಣೆ ಮಾಡಲಾಗುತ್ತದೆ’ ಎಂದು ಉಗ್ರಾಣದ ವ್ಯವಸ್ಥಾಪಕರು ವಿವರಿಸಿದರು.

‘ಪ್ರತಿಯೊಂದು ಲಸಿಕಾ ಸ್ಥಳಗಳನ್ನು ಕೋಲ್ಡ್ ಚೈನ್ ಪಾಯಿಂಟ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದ ನೀಲನಕ್ಷೆಯನ್ನೂ ಸಿದ್ದಪಡಿಸಲಾಗಿದೆ. ಲಸಿಕೆ ನೀಡುವ ದಿನ ಕೋಲ್ಡ್ ಚೈನ್ ಪಾಯಿಂಟ್‌ನಿಂದ ಲಸಿಕೆ ನೀಡುವ ಕೇಂದ್ರಗಳಿಗೆ ಲಸಿಕೆ ತಲುಪಿಸಲಾಗುತ್ತದೆ’ ಎಂದೂ ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು