ಬುಧವಾರ, ನವೆಂಬರ್ 25, 2020
21 °C

ತುಸು ಏರಿಕೆ ಕಂಡ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಪೀಡಿತರ ಸಂಖ್ಯೆಯಲ್ಲಿ ತುಸು ಏರಿಕೆ ಕಂಡಿದ್ದು, ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆಯವರೆಗಿನ 24 ಗಂಟೆಯಲ್ಲಿ 3,691 ಹೊಸ ಪ್ರಕರಣಗಳು ವರದಿಯಾಗಿವೆ.

ಹಿಂದಿನ ಮೂರು ತಿಂಗಳುಗಳಲ್ಲೇ ದಾಖಲೆ ಎನಿಸುವ ಕಡಿಮೆ ಮಟ್ಟಕ್ಕೆ (3130) ಸೋಂಕಿತರ ಸಂಖ್ಯೆ ಸೋಮವಾರ ಇಳಿಕೆಯಾಗಿತ್ತು. ಈ ಲೆಕ್ಕಾಚಾರ ಮಂಗಳವಾರ ಬದಲಾಗಿದ್ದು, ಏರು ಮುಖ ಕಂಡಿದೆ. 24 ಗಂಟೆಗಳಲ್ಲಿ 14,386 ರ್‍ಯಾಪಿಡ್ ಆಂಟಿಜೆನ್‌ ಪರೀಕ್ಷೆ ಹಾಗೂ 52,316 ಆರ್‌ಟಿಪಿಸಿಆರ್ ಪರೀಕ್ಷೆ ಸೇರಿ ಒಟ್ಟು 66,701 ಜನರನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ.

24 ಗಂಟೆಗಳ ಈ ಅವಧಿಯಲ್ಲಿ 7,740 ಜನರಿಗೆ ಕಾಯಿಲೆ ವಾಸಿಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ, ಈವರೆಗೆ 7,27,298 ಮಂದಿಗೆ ಕೋವಿಡ್‌ ಗುಣವಾದಂತಾಗಿದೆ. ಒಟ್ಟು 71,330 ಸಕ್ರಿಯ ಪ್ರಕರಣಗಳಿದ್ದು, 944 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 24 ಮಂದಿ ಸೇರಿದಂತೆ ರಾಜ್ಯದಲ್ಲಿ 44 ಮಂದಿ ಮೃತ ಪಟ್ಟಿರುವುದು ಮಂಗಳವಾರ ದೃಢಪಟ್ಟಿದೆ. ಇದರಿಂದಾಗಿ ಸೋಂಕಿನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 11 ಸಾವಿರದತ್ತ (10,991) ಸಾಗಿದೆ.

ಬೆಂಗಳೂರಿನಲ್ಲಿ 1,874 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.29 ಲಕ್ಷ ದಾಟಿದೆ. ಮೈಸೂರಿನಲ್ಲಿ 188, ವಿಜಯಪುರದಲ್ಲಿ 128, ಮಂಡ್ಯದಲ್ಲಿ 123 ಹಾಗೂ  ದಕ್ಷಿಣಕನ್ನಡದಲ್ಲಿ 122 ಹೊಸ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು